ADVERTISEMENT

ಪಕ್ಷ ವಿರೋಧಿ ಚಟುವಟಿಕೆ: ಮಾಜಿ ಸಚಿವ ಶಿವತಾರೆ ಉಚ್ಛಾಟಿಸಿದ ಶಿವಸೇನಾ

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 14:26 IST
Last Updated 16 ಜುಲೈ 2022, 14:26 IST
ವಿಜಯ ಶಿವತಾರೆ ಟ್ವಿಟರ್‌ ಚಿತ್ರ: @vijayshivtare
ವಿಜಯ ಶಿವತಾರೆ ಟ್ವಿಟರ್‌ ಚಿತ್ರ: @vijayshivtare    

ಮುಂಬೈ: ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇರೆಗೆ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾವು ಮಾಜಿ ಸಚಿವ ವಿಜಯ ಶಿವತಾರೆ ಅವರನ್ನು ಉಚ್ಚಾಟಿಸಿದೆ.

ಪುಣೆ ಜಿಲ್ಲೆಯ ಪುರಂದರ ಕ್ಷೇತ್ರ ಪ್ರತಿನಿಧಿಸುತ್ತಿರುವ ಶಿವತಾರೆ ಅವರ ಉಚ್ಚಾಟನೆ ನಿರ್ಧಾರವನ್ನು ಸೇನಾ ಮುಖವಾಣಿ ‘ಸಾಮ್ನಾ’ದಲ್ಲಿ ಪ್ರಕಟಿಸಲಾಗಿದೆ.

‘ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಬಣವು ನಿಜವಾದ ಶಿವಸೇನಾ. 2019 ರಲ್ಲಿ ಕಾಂಗ್ರೆಸ್‌ ಜತೆ ಕೈ ಜೋಡಿಸುವ ನಿರ್ಧಾರ ಬಗ್ಗೆ ಶಿವಸೇನಾದಲ್ಲಿ ಯಾರಿಗೂ ಸಂತೋಷ ಇರಲಿಲ್ಲ. ಬಾಳಾ ಠಾಕ್ರೆ ಆಶಯದಂತೆ ಹಿಂದುತ್ವ ಎತ್ತಿಹಿಡಿಯುತ್ತಿರುವುದು ನಿಜವಾದ ಶಿವಸೇನಾ’ ಎಂದು ಶಿವತಾರೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.