ADVERTISEMENT

ರ್‍ಯಾನ್‌ಬಾಕ್ಸಿ ಫಾರ್ಮಾಸ್ಯುಟಿಕಲ್ಸ್‌ನ ಮಾಜಿ ಪ್ರವರ್ತಕ ಶಿವಿಂದರ್ ಸಿಂಗ್ ಬಂಧನ

ಏಜೆನ್ಸೀಸ್
Published 10 ಅಕ್ಟೋಬರ್ 2019, 14:25 IST
Last Updated 10 ಅಕ್ಟೋಬರ್ 2019, 14:25 IST
ಶಿವಿಂದರ್ ಸಿಂಗ್
ಶಿವಿಂದರ್ ಸಿಂಗ್   

ನವದೆಹಲಿ: ₹740 ಕೋಟಿ ಅವ್ಯವಹಾರ ಆರೋಪದಲ್ಲಿ ರ್‍ಯಾನ್‌ಬಾಕ್ಸಿ ಫಾರ್ಮಾಸ್ಯುಟಿಕಲ್ಸ್‌ನ ಮಾಜಿ ಪ್ರವರ್ತಕ ಶಿವಿಂದರ್ ಸಿಂಗ್, ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಗೋಧ್ವಾನಿ ಸೇರಿದಂತೆ ಮೂವರನ್ನು ದೆಹಲಿ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧ ದಳ ಗುರುವಾರ ಬಂಧಿಸಿದೆ.

2018 ಡಿಸೆಂಬರ್‌ನಲ್ಲಿ ರೆಲಿಗೇರ್ ಎಂಟರ್‌ಪ್ರೈಸೆಸ್ ಲಿಮಿಟೆಡ್ (ಆರ್‌ಇಎಲ್) ಅಧೀನದ ರೆಲಿಗೇರ್ ಫಿನ್‌ವೆಸ್ಟ್ (ಆರ್‌ಎಫ್ಎಲ್) ಪ್ರವರ್ತಕ ಮಲ್ವಿಂದರ್ ಮೋಹನ್ ಸಿಂಗ್ ಮತ್ತು ಶಿವಿಂದರ್ ಮೋಹನ್ ಸಿಂಗ್ ವಿರುದ್ಧ ದೆಹಲಿ ಪೊಲೀಸರ ಆರ್ಥಿಕ ಅಪರಾಧ ದಳಕ್ಕೆ ದೂರು ನೀಡಿತ್ತು. ಇದಾಗಿ 5 ತಿಂಗಳ ನಂತರ ಮೋಸ, ವಂಚನೆ ಮತ್ತು ಫಂಡ್ ದುರ್ಬಳಕೆ ಆರೋಪ ಹೊರಿಸಿತ್ತು.

ADVERTISEMENT

ಆಗಸ್ಟ್ ತಿಂಗಳಲ್ಲಿ ಜಾರಿ ನಿರ್ದೇಶನಾಲಯವು ಸಿಂಗ್ ಸಹೋದರ ಮನೆಯಲ್ಲಿ ಶೋಧ ನಡೆಸಿತ್ತು.

ಸುಮಾರು ₹740 ಕೋಟಿ ವಂಚನೆ ಮತ್ತು ದುರುಪಯೋಗ ನಡೆಸಿದ್ದಾರೆ ಎಂದು ರೆಲಿಗೇರ್ ಫಿನ್‌ವೆಸ್ಟ್, ಸಿಂಗ್ ಸಹೋದರರ ವಿರುದ್ಧ ಆರೋಪಿಸಿದೆ.

ಎರಡು ಶತಕೋಟಿ ಡಾಲರ್ ಮೌಲ್ಯದ ರ್‍ಯಾನ್‌ಬಾಕ್ಸಿ ಲ್ಯಾಬೊರೇಟರೀಸ್ ವಾರೀಸುದಾರರಾಗಿದ್ದರು ಶಿವಿಂದರ್ ಸಿಂಗ್ ಮತ್ತು ಮಲ್ವಿಂದರ್ ಸಿಂಗ್. 2008ರಲ್ಲಿ ಇವರು ರ್‍ಯಾನ್‌ಬಾಕ್ಸಿಯನ್ನು ಜಪಾನಿನ ದಾಯ್ಚಿ ಸಾಂಕ್ಯೊ ಕಂಪನಿಗೆ ಮಾರಿ ಕುಟುಂಬ ಮಾಲೀಕತ್ವದ ಫೊರ್ಟೀಸ್ ಹೆಲ್ತ್ ಕೇರ್ ಮತ್ತು ರೆಲಿಗೇರ್ ಎಂಟರ್‌ಪ್ರೈಸೆಸ್‌ನ್ನು ಕಂಪನಿಯನ್ನು ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.