ನವದೆಹಲಿ: ಗಗನಯಾನಿ ಶುಭಾಂಶು ಶುಕ್ಲಾ ಅವರ ಜೀವನಗಾಥೆಯನ್ನು ಒಳಗೊಂಡ ‘ಸ್ಕೈ ವಾಸ್ ನೆವರ್ ದ ಲಿಮಿಟ್’ ಕೃತಿಯು ಬಿಡುಗಡೆಯಾಗಿದೆ.
ರೂಪಾ ಸಂಸ್ಥೆಯು ಹೊರತಂದಿರುವ ಕೃತಿಯನ್ನು ಸಾಕ್ಷ್ಯಚಿತ್ರ ನಿರ್ಮಾಪಕ ಆರ್. ನಾರಾಯಣ್ ಬರೆದಿದ್ದಾರೆ. ಕೃತಿಯ ಬೆಲೆ ₹295. ಆನ್‌ಲೈನ್ ಹಾಗೂ ಅಂಗಡಿಗಳಲ್ಲಿ ಖರೀದಿಗೆ ಲಭ್ಯವಿದೆ.
ಕೃತಿಯು ಏಳು ಅಧ್ಯಯನಗಳನ್ನು ಒಳಗೊಂಡಿದೆ. ಲಖನೌದಿಂದ ಭೂಕಕ್ಷೆ ತನಕ, ‘ಪರಂಪರೆಯಲ್ಲ, ಕೇವಲ ನಿರ್ಣಯ’, ನಾಯಕನ ಒಳಪಯಣ, ದೇಶದ ಹೆಮ್ಮೆ– ನೂರು ಕೋಟಿ ನಿರೀಕ್ಷೆ ಸೇರಿದಂತೆ, ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಪತ್ನಿಯ ಅಭಿಪ್ರಾಯವನ್ನು ಕೃತಿಯು ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.