ADVERTISEMENT

ಲಸಿಕೆ ಉತ್ಪಾದನೆಗೆ ಬೇಕಾದ ಕಚ್ಚಾ ವಸ್ತುಗಳ ನಿರ್ಬಂಧ ಕೈಬಿಡಲು ಅಮೆರಿಕಕ್ಕೆ ಮನವಿ

ಪಿಟಿಐ
Published 16 ಏಪ್ರಿಲ್ 2021, 19:21 IST
Last Updated 16 ಏಪ್ರಿಲ್ 2021, 19:21 IST
ಸೆರಂ ಇನ್‌ಸ್ಟಿಟ್ಯೂಟ್‌ ಸಂಸ್ಥೆಯ ಉತ್ಪಾದನಾ ಘಟಕ
ಸೆರಂ ಇನ್‌ಸ್ಟಿಟ್ಯೂಟ್‌ ಸಂಸ್ಥೆಯ ಉತ್ಪಾದನಾ ಘಟಕ   

ಮುಂಬೈ :ಕೋವಿಡ್ ಲಸಿಕೆ ತಯಾರಿಕೆಗೆ ಅಗತ್ಯವಿರುವ ಕಚ್ಚಾವಸ್ತುಗಳ ಕೊರತೆ ಉಂಟಾಗಿದೆ. ಹೀಗಾಗಿ ಕಚ್ಚಾವಸ್ತುಗಳ ರಫ್ತಿನ ಮೇಲೆ ಹಾಕಿರುವ ನಿರ್ಬಂಧವನ್ನು ತೆರವು ಮಾಡಿ ಎಂದು ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾದ ಸಿಇಒ ಆದಾರ್ ಪೂನಾವಾಲಾ ಅವರು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಅಮೆರಿಕದಲ್ಲಿ ಲಸಿಕೆ ತಯಾರಿಕೆಗೆ ಕಚ್ಚಾವಸ್ತುಗಳ ಕೊರತೆ ಆಗದೇ ಇರಲಿ ಎಂದು, ಆ ವಸ್ತುಗಳ ರಫ್ತಿನ ಮೇಲೆ ಜೋ ಬೈಡನ್ ಅವರ ಸರ್ಕಾರವು ನಿರ್ಬಂಧ ಹೇರಿದೆ.

‘ಕೋವಿಡ್‌ ವಿರುದ್ಧದ ಹೋರಾಟದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡುತ್ತಿದ್ದೇವೆ ಎನ್ನುವುದಾದರೆ, ಕಚ್ಚಾವಸ್ತುಗಳ ರಫ್ತಿನ ಮೇಲೆ ಅಮೆರಿಕದಲ್ಲಿ ಹೇರಿರುವ ನಿರ್ಬಂಧವನ್ನು ತೆರವು ಮಾಡಿ ಎಂದು ಅಮೆರಿಕದ ಹೊರಗಿರುವ ಎಲ್ಲಾ ದೇಶಗಳ ಲಸಿಕೆ ತಯಾರಕರ ಪರವಾಗಿ ನಿಮ್ಮನ್ನು ಕೇಳಿಕೊಳ್ಳುತ್ತಿದ್ದೇನೆ’ ಎಂದು ಪೂನಾವಾಲಾ ಅವರು ಶುಕ್ರವಾರ ಟ್ವೀಟ್ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.