ADVERTISEMENT

ಲೋಕಸಭಾ ಚುನಾವಣೆ ಆಸುಪಾಸಿನಲ್ಲಿ 10 ರಾಜ್ಯಗಳ ವಿಧಾನಸಭಾ ಅವಧಿ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2023, 15:41 IST
Last Updated 1 ಸೆಪ್ಟೆಂಬರ್ 2023, 15:41 IST
ರಾಮನಾಥ ಕೋವಿಂದ್
ರಾಮನಾಥ ಕೋವಿಂದ್   

ನವದೆಹಲಿ: ದೇಶದಲ್ಲಿ ಕನಿಷ್ಠ ಹತ್ತು ರಾಜ್ಯಗಳ ವಿಧಾನಸಭೆಗಳ ಅವಧಿಯು 2024ರ ಲೋಕಸಭಾ ಚುನಾವಣೆಯ ನಿಗದಿತ ಸಮಯಕ್ಕಿಂತ ಮೊದಲು ಇಲ್ಲವೇ ಅದರ ಆಸುಪಾಸಿನಲ್ಲಿ ಕೊನೆಗೊಳ್ಳಲಿದೆ.

ಈ ವರ್ಷಾಂತ್ಯದಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಮಿಜೋರಾಂ, ಛತ್ತೀಸಗಢ ರಾಜ್ಯಗಳಿಗೆ ವಿಧಾನಸಭಾ ಚುನಾವಣೆಯು ನಡೆಯಲಿದೆ. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಜಾರ್ಖಂಡ್‌ ರಾಜ್ಯಗಳಲ್ಲಿ ಲೋಕಸಭಾ ಚುನಾವಣೆಯ ಸಮಯದಲ್ಲೇ ವಿಧಾನಸಭಾ ಚುನಾವಣೆಗಳು ನಡೆಯುವ ಸಾಧ್ಯತೆ ಇದೆ.

ವಿವಿಧ ರಾಜ್ಯಗಳ ವಿಧಾನಸಭೆಗಳ ಮುಕ್ತಾಯದ ಅವಧಿಯ ಸಾಧ್ಯತೆ

ADVERTISEMENT

ರಾಜ್ಯಗಳು; ಚುನಾವಣಾ; ವರ್ಷ

1; ಮಿಜೋರಾಂ;2023 ಡಿಸೆಂಬರ್

2; ಛತ್ತೀಸಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ;2024 ಜನವರಿ

3; ಆಂಧ್ರಪ್ರದೇಶ, ಅರುಣಾಚಲಪ್ರದೇಶ, ಒಡಿಶಾ, ಸಿಕ್ಕಿಂ;2024 ಜೂನ್‌

4; ಹರಿಯಾಣ, ಮಹಾರಾಷ್ಟ್ರ;2024 ನವೆಂಬರ್

5; ಜಾರ್ಖಂಡ್‌;2024 ಡಿಸೆಂಬರ್

6; ದೆಹಲಿ; 2025 ಫೆಬ್ರುವರಿ

7; ಬಿಹಾರ;2025 ನವೆಂಬರ್

8; ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ;2026 ಮೇ

‌9; ಪುದುಚೇರಿ; 2026 ಜೂನ್

10; ಗೋವಾ, ಮಣಿಪುರ, ಪಂಜಾಬ್, ಉತ್ತರಾಖಂಡ;2027 ಮಾರ್ಚ್

11; ಉತ್ತರಪ್ರದೇಶ; 2027 ಮೇ

12; ಗುಜರಾತ್, ಹಿಮಾಚಲಪ್ರದೇಶ;2027 ಡಿಸೆಂಬರ್

13; ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ; 2028;ಮಾರ್ಚ್‌

14; ಕರ್ನಾಟಕ; 2028 ಮೇ

(ಜಮ್ಮು ಮತ್ತು ಕಾಶ್ಮೀರವು ಕೇಂದ್ರಾಡಳಿತ ಅವಧಿಯನ್ನು ಪೂರ್ಣಗೊಳಿಸುವ ಬಗ್ಗೆ ಇನ್ನೂ ಸ್ಪಷ್ಟನೆ ದೊರೆತಿಲ್ಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.