ADVERTISEMENT

ಸಿಂಗಪುರ: ದೇವಸ್ಥಾನದ ಪ್ರಧಾನ ಅರ್ಚಕ ಬಂಧನ

ಚಿನ್ನಾಭರಣ ನಾಪತ್ತೆ

ಪಿಟಿಐ
Published 2 ಆಗಸ್ಟ್ 2020, 8:46 IST
Last Updated 2 ಆಗಸ್ಟ್ 2020, 8:46 IST

ಸಿಂಗಪುರ: ಇಲ್ಲಿನ ಮರಿಯಮ್ಮನ ದೇವಾಲಯದ ಪ್ರಧಾನ ಅರ್ಚಕರನ್ನು ಸಿಂಗಪುರ ಪೊಲೀಸರು ಬಂಧಿಸಿದ್ದಾರೆ.

ಪ್ರಧಾನ ಅರ್ಚಕರ ಸುಪರ್ದಿಯಲ್ಲಿದ್ದ ಕೆಲ ಚಿನ್ನಾಭರಣಗಳು ನಾಪತ್ತೆಯಾಗಿದ್ದರಿಂದ ದೇವಸ್ಥಾನದ ಆಡಳಿತ ಮಂಡಳಿ ದೂರು ಸಲ್ಲಿಸಿತ್ತು.

ಪೂಜೆಯ ಸಮಯದಲ್ಲಿ ದೇವಿಯ ಶೃಂಗಾರಕ್ಕೆ ಚಿನ್ನಾಭರಣಗಳನ್ನು ಬಳಸಲಾಗುತ್ತದೆ. ಹಾಗಾಗಿ ಈ ಆಭರಣಗಳನ್ನು ಪ್ರಧಾನ ಅರ್ಚಕರಿಗೆ ನೀಡಲಾಗಿತ್ತು. ಆದರೆ, ಪರಿಶೀಲನೆ ಸಂದರ್ಭದಲ್ಲಿ ಕೆಲವು ಆಭರಣಗಳು ನಾಪತ್ತೆಯಾಗಿರುವುದು ತಿಳಿದು ಬಂದಿತ್ತು.

ADVERTISEMENT

‘ಈ ಪ್ರಕರಣದ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ಪ್ರಧಾನ ಅರ್ಚಕರು ತಪ್ಪೊಪ್ಪಿಕೊಂಡಿದ್ದು, ನಾಪತ್ತೆಯಾಗಿದ್ದ ಚಿನ್ನಾಭರಣವನ್ನು ಹಿಂತಿರುಗಿಸದ್ದಾರೆ. ಈ ಪ್ರಕರಣದಲ್ಲಿ ಮತ್ತೊಬ್ಬರು ಭಾಗಿಯಾಗಿಲ್ಲ’ ಎಂದು ಮರಿಯಮ್ಮನ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.