ADVERTISEMENT

Covid-19 India Update: 24 ಗಂಟೆಗಳಲ್ಲಿ 38,902 ಪ್ರಕರಣಗಳಲ್ಲಿ ಕೋವಿಡ್‌ ದೃಢ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜುಲೈ 2020, 4:27 IST
Last Updated 19 ಜುಲೈ 2020, 4:27 IST
ಕೊರೊನಾ ವೈರಸ್ ಸೋಂಕು ಪರೀಕ್ಷೆ– ಸಂಗ್ರಹ ಚಿತ್ರ
ಕೊರೊನಾ ವೈರಸ್ ಸೋಂಕು ಪರೀಕ್ಷೆ– ಸಂಗ್ರಹ ಚಿತ್ರ   

ಬೆಂಗಳೂರು: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್‌–19 ದೃಢಪಟ್ಟ 38,902 ಹೊಸ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿನಿಂದ ದೇಶದಾದ್ಯಂತ 543 ಮಂದಿ ಸಾವಿಗೀಡಾಗಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಪ್ರಸ್ತುತ ದೇಶದಲ್ಲಿ 3,73,379 ಸಕ್ರಿಯ ಪ್ರಕರಣಗಳಿದ್ದು, 6,77,423 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈವರೆಗೂ ದೇಶದಲ್ಲಿ ಒಟ್ಟು 10,77,618 ಕೋವಿಡ್‌ ಪ್ರಕರಣಗಳು ದಾಖಲಾಗಿವೆ ಹಾಗೂ 26,816 ಮಂದಿ ಸೋಂಕಿನ ಕಾರಣಗಳಿಂದ ಮೃತಪಟ್ಟಿದ್ದಾರೆ.

ಜುಲೈ 18ರ ವರೆಗೂ 01,37,91,869 ಮಾದರಿಗಳ ಪರೀಕ್ಷೆ ನಡೆಸಿರುವುದಾಗಿ ಐಸಿಎಂಆರ್‌ ಹೇಳಿದೆ.

ADVERTISEMENT

ಮಹಾರಾಷ್ಟ್ರದಲ್ಲಿ ಒಟ್ಟು 3,00,937 ಲಕ್ಷ ಸೋಂಕು ಪ್ರಕರಣಗಳು ದಾಖಲಾಗಿವೆ. ಇದುವರೆಗೆ 11,596 ಮಂದಿ ಮೃತಪಟ್ಟಿದ್ದಾರೆ. 1,23,678 ಸಕ್ರಿಯ ಪ್ರಕರಣಗಳಿದ್ದು, 1,65,663 ಮಂದಿ ಗುಣಮುಖರಾಗಿದ್ದಾರೆ. ರಾಜಧಾನಿ ದೆಹಲಿಯಲ್ಲಿ 16,711 ಸಕ್ರಿಯ ಪ್ರಕರಣಗಳಿದ್ದು, 1,01,274 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 1,21,582 ಲಕ್ಷ ಮಂದಿಗೆ ಸೋಂಕು ಪ್ರಕರಣಗಳು ದಾಖಲಾಗಿವೆ. ಇದುವರೆಗೆ 3,597 ಮಂದಿ ಮೃತಪಟ್ಟಿದ್ದಾರೆ.

ತಮಿಳುನಾಡಿನಲ್ಲಿ 49,455 ಸಕ್ರಿಯ ಪ್ರಕರಣಗಳಿದ್ದು, 1,13,856 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 1,65,714 ಕೋವಿಡ್‌ ಪ್ರಕರಣಗಳ ಪೈಕಿ 2,403 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.