
ಮಮತಾ ಬ್ಯಾನರ್ಜಿ
ಬಹರಾಮ್‌ಪುರ: ‘ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಬಳಸಿಕೊಂಡು ಬಿಜೆಪಿಯು ಧಾರ್ಮಿಕ ರಾಜಕಾರಣದಲ್ಲಿ ತೊಡಗಿದೆ. ಎಸ್‌ಐಆರ್ ಸಂಬಂಧ ಮೃತಪಟ್ಟವರಲ್ಲಿ ಅರ್ಧದಷ್ಟು ಜನರು ಹಿಂದೂಗಳೇ ಆಗಿದ್ದಾರೆ. ನಿಮ್ಮ ಗುಂಡಿಯನ್ನು ನೀವೇ ತೋಡಿಕೊಳ್ಳಬೇಡಿ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿದರು.
ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ಮುರ್ಶಿದಾಬಾದ್ ಜಿಲ್ಲೆಯಲ್ಲಿ ನಡೆದ ಎಸ್‌ಐಆರ್ ವಿರುದ್ಧದ ರ್‍ಯಾಲಿಯಲ್ಲಿ ಅವರು ಮಾತನಾಡಿದರು.
‘ನಾನು ಈವರೆಗೂ ಗಣತಿ ನಮೂನೆಯನ್ನು ಭರ್ತಿ ಮಾಡಿಲ್ಲ. ನಿಮ್ಮೆಲ್ಲ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಬಳಿಕವಷ್ಟೇ ನಾನು ನಮೂನೆ ಭರ್ತಿ ಮಾಡುತ್ತೇನೆ. ಎಸ್‌ಐಆರ್ ಪ್ರಕ್ರಿಯೆ ಸಂಬಂಧ ಜನರಿಗೆ ಅನುಕೂಲವಾಗುವಂತೆ ಪ್ರತಿ ಮತಗಟ್ಟೆಯಲ್ಲಿಯೂ ಶಿಬರಗಳನ್ನು ರೂಪಿಸಲಾಗಿದೆ’ ಎಂದರು.
‘ಅದೇನೇ ತೊಂದರೆ ಬಂದರೂ ನಾನು ಬಂಗಾಳದಲ್ಲಿ ಎನ್‌ಆರ್‌ಸಿ ನಡೆಸಲು ಬಿಡುವುದಿಲ್ಲ. ಬಂಧನ ಕೇಂದ್ರಗಳು ತಲೆಎತ್ತುವುದನ್ನೂ ಬಿಡುವುದಿಲ್ಲ. ಇದು ಎಲ್ಲರಿಗೂ ‘ಸುರಕ್ಷಿತ’ ರಾಜ್ಯವಾಗಿಯೇ ಉಳಿಯಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.