
ನವದೆಹಲಿ: ಮಾಜಿ ಮುಖಂಡ ಸೀತಾರಾಂ ಕೇಸರಿ ಅವರನ್ನು ಕಾಂಗ್ರೆಸ್ ಪಕ್ಷ ಶುಕ್ರವಾರ ದಿಢೀರ್ ನೆನಪಿಸಿಕೊಂಡು, ಅವರ 25ನೇ ಪುಣ್ಯಸ್ಮರಣೆ ಆಚರಿಸಿತು.
1960ರ ದಶಕದಲ್ಲಿ ಕಾಂಗ್ರೆಸ್‌ನ ಪ್ರಧಾನ ಕಚೇರಿಯಾಗಿದ್ದ ‘24 ಅಕ್ಬರ್ ರೋಡ್’ನಲ್ಲಿ ಸೀತಾರಾಂ ಕೇಸರಿ ಅವರ ಭಾವಚಿತ್ರಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ಪುಷ್ಷನಮನ ಸಲ್ಲಿಸಲಾಯಿತು.
ಇದೇ ‘24 ಅಕ್ಬರ್ ರೋಡ್’ ಕಚೇರಿಯಲ್ಲೇ ಸೀತಾರಾಂ ಕೇಸರಿ ಅವರ ಮೇಲೆ ಎರಡು ಬಾರಿ ಹಲ್ಲೆಯಾಗಿತ್ತು. 1998ರಲ್ಲಿ ಸೋನಿಯಾ ಗಾಂಧಿ ಅವರಿಗೆ ಹಾದಿ ಸುಗಮಗೊಳಿಸಲು ಸೀತಾರಾಂ ಅವರನ್ನು ಇಲ್ಲಿಂದಲೇ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಹೀಗೆ ಕಾಂಗ್ರೆಸ್ ತನ್ನ ಇತಿಹಾಸದಿಂದಲೇ ಬದಿಗೆ ಸರಿಸಿದ್ದ ಸೀತಾರಾಂ ಅವರನ್ನು ಈಗ ದಿಢೀರ್ ಸ್ಮರಿಸಿಕೊಂಡಿದ್ದರ ಹಿಂದೆ ಬಿಹಾರ ವಿಧಾನಸಭಾ ಚುನಾವಣೆಯ ಕಾರ್ಯತಂತ್ರ ಅಡಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಬಿಹಾರ ಮೂಲದ, ಸೀತಾರಾಂ ಕೇಸರಿ ಅವರನ್ನು ಪುಣ್ಮಸ್ಮರಣೆ ಹೆಸರಿನಲ್ಲಿ ಕಾಂಗ್ರೆಸ್ ನೆನಪಿಸಿಕೊಂಡಿರುವುದು, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿರುವುದು ಬುದ್ಧಿವಂತ ರಾಜಕೀಯ ನಡೆ ಎನ್ನಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.