ADVERTISEMENT

ಸೀತಾರಾಂ ಯೆಚೂರಿ ಸ್ಪರ್ಧೆಗೆ ಭಿನ್ನಮತ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 20:00 IST
Last Updated 8 ಮಾರ್ಚ್ 2020, 20:00 IST
ಸೀತಾರಾಂ ಯೆಚೂರಿ
ಸೀತಾರಾಂ ಯೆಚೂರಿ   

ಕೋಲ್ಕತ್ತ: ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರನ್ನು ಪಶ್ಚಿಮ ಬಂಗಾಳದಿಂದ ರಾಜ್ಯಸಭಾ ಚುನಾವಣೆಗೆ ನಿಲ್ಲಿಸುವ ವಿಚಾರದಲ್ಲಿ ಆ ಪಕ್ಷದೊಳಗೆ ಭಿನ್ನಾಭಿಪ್ರಾಯ ಉಂಟಾಗಿದೆ.

26 ಶಾಸಕರನ್ನು ಹೊಂದಿರುವ ಸಿಪಿಎಂಗೆ ಏಕಾಂಗಿಯಾಗಿ ಒಂದು ಸ್ಥಾನ ಗೆಲ್ಲುವ ಶಕ್ತಿ ಇಲ್ಲ. ಆದರೆ ಯೆಚೂರಿ ಅವರನ್ನು ಕಣಕ್ಕೆ ಇಳಿಸಿದರೆ ಬೆಂಬಲ ನೀಡುವುದಗಿ 45 ಶಾಸಕರನ್ನು ಹೊಂದಿರುವ ಕಾಂಗ್ರೆಸ್‌ ಹೇಳಿದೆ. ಕಾಂಗ್ರೆಸ್‌ ಬೆಂಬಲ ಪಡೆಯುವ ವಿಚಾರದಲ್ಲಿ ಸಿಪಿಎಂ ಒಳಗಡೆ ಭಿನ್ನಮತ ಉದ್ಭವಿಸಿದೆ.

ಟಿಎಂಸಿ ಅಭ್ಯರ್ಥಿಗಳ ಘೋಷಣೆ: ಮುಂಬರುವ ರಾಜ್ಯಸಭೆ ಚುನಾವಣೆಗೆ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಭಾನುವಾರ ಬಿಡುಗಡೆ ಮಾಡಿದ್ದಾರೆ.

ADVERTISEMENT

ಅರ್ಪಿತಾ ಘೋಷ್‌, ಮೌಸಮ್‌ ನೂರ್‌, ದಿನೇಶ್‌ ತ್ರಿವೇದಿ ಹಾಗೂ ಸುಬ್ರತಾ ಬಕ್ಷಿ ಅವರಿಗೆ ಟಿಕೆಟ್‌ ನೀಡಲಾಗಿದೆ. ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ ಅವರು, ‘ಮಹಿಳಾ ಸಬಲೀಕರಣಕ್ಕೆ ನನ್ನ ನಿರಂತರವಾದ ಪ್ರಯತ್ನ ಮುಂದುವರಿದಿದೆ. ಇಬ್ಬರು ಮಹಿಳೆಯರಿಗೆ ಅವಕಾಶ ನೀಡಿರುವುದು ಹೆಮ್ಮೆ ಎನಿಸುತ್ತಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.