ADVERTISEMENT

ಸೀತಾರಾಮ್ ಯೆಚೂರಿ ಅವರ ಹಿರಿಯ ಪುತ್ರ ಆಶಿಶ್ ಕೋವಿಡ್‌ನಿಂದ ನಿಧನ

ಪಿಟಿಐ
Published 22 ಏಪ್ರಿಲ್ 2021, 7:52 IST
Last Updated 22 ಏಪ್ರಿಲ್ 2021, 7:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ತಮ್ಮ ಹಿರಿಯ ಮಗ ಆಶಿಶ್ ಕೋವಿಡ್‌ನಿಂದ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ ಎಂದು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ತಿಳಿಸಿದ್ದಾರೆ.

‘ನನ್ನ ಹಿರಿಯ ಮಗ ಆಶಿಶ್ ಯೆಚೂರಿಯನ್ನು ಕೋವಿಡ್‌ನಿಂದ ಇಂದು ಬೆಳಿಗ್ಗೆ ಕಳೆದುಕೊಂಡೆ ಎಂದು ನಾನು ತಿಳಿಸಬೇಕಾಗಿರುವುದು ಬಹಳ ದುಃಖದ ಸಂಗತಿಯಾಗಿದೆ. ನಮಗೆ ಭರವಸೆ ಮತ್ತು ಅವನಿಗೆ ಉತ್ತಮ ಚಿಕಿತ್ಸೆ ನೀಡಿದ ವೈದ್ಯರು, ದಾದಿಯರು, ಮುಂಚೂಣಿ ಆರೋಗ್ಯ ಕಾರ್ಯಕರ್ತರು, ನೈರ್ಮಲ್ಯ ಕಾರ್ಮಿಕರು ಮತ್ತು ನಮ್ಮೊಂದಿಗೆ ನಿಂತ ಅಸಂಖ್ಯಾತ ಜನರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ’ ಎಂದು ಯೆಚೂರಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಜೂನ್ 9 ರಂದು 35 ನೇ ವರ್ಷಕ್ಕೆ ಕಾಲಿಡುತ್ತಿದ್ದ ಆಶಿಶ್, ಗುರ್‌ ಗಾಂವ್‌ನ ಮೇದಾಂತಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಕೊರೊನಾ ವಿರುದ್ಧದ ಎರಡು ವಾರಗಳ ಹೋರಾಟದ ಬಳಿಕ ಬೆಳಿಗ್ಗೆ 5.30 ಕ್ಕೆ ಅವರು ಹಠಾತ್ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ಪಿಟಿಐಗೆ ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.