ADVERTISEMENT

‘ಸ್ಪ್ರಿಂಕ್ಲರ್’ ಒಪ್ಪಂದದಲ್ಲಿ ಶಿವಶಂಕರ್‌ಗೆ ದುರುದ್ದೇಶವಿರಲಿಲ್ಲ: ವರದಿ

ಕೇರಳ: ತ್ರಿಸದಸ್ಯ ಸಮಿತಿಯ ವರದಿ

ಪಿಟಿಐ
Published 1 ಸೆಪ್ಟೆಂಬರ್ 2021, 14:55 IST
Last Updated 1 ಸೆಪ್ಟೆಂಬರ್ 2021, 14:55 IST
ಎಂ. ಶಿವಶಂಕರ್
ಎಂ. ಶಿವಶಂಕರ್   

ತಿರುವನಂತಪುರ: ‘ಸ್ಪ್ರಿಂಕ್ಲರ್’ ಸಂಸ್ಥೆ ಜತೆಗಿನ ಒಪ್ಪಂದದಲ್ಲಿ ಕೇರಳದ ಮಾಜಿ ಐ.ಟಿ ಕಾರ್ಯದರ್ಶಿ ಎಂ.ಶಿವಶಂಕರ್ ಅವರು ಯಾವುದೇ ರೀತಿಯ ದುರುದ್ದೇಶ ಹೊಂದಿರಲಿಲ್ಲ ಎಂದು ‘ಸ್ಪ್ರಿಂಕ್ಲರ್’ ಪ್ರಕರಣದ ತನಿಖೆ ಕುರಿತು ನೇಮಿಸಿದ್ದ ತ್ರಿಸದಸ್ಯರ ಸಮಿತಿ ವರದಿಯಲ್ಲಿ ತಿಳಿಸಿದೆ.

‘ಈ ಸಂಸ್ಥೆ ಜತೆಗಿನ ಒಪ್ಪಂದದಿಂದ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ. ಒಪ್ಪಂದಿಂದ ರಾಜ್ಯದ ಹಿತಾಸಕ್ತಿ ಮೇಲೆ ಪ್ರತಿಕೂಲ ಪರಿಣಾಮ ಬೀರಿರುವ ಕುರಿತು ಯಾವುದೇ ಪುರಾವೆಗಳಿಲ್ಲ’ ಎಂದು ಕೇರಳದ ಮಾಜಿ ಕಾನೂನು ಕಾರ್ಯದರ್ಶಿ ಕೆ. ಶಶಿಧರನ್ ನಾಯರ್ ಅಧ್ಯಕ್ಷತೆಯ ತ್ರಿಸದಸ್ಯ ಸಮಿತಿಯು ವರದಿಯಲ್ಲಿ ಹೇಳಿದೆ.

ಕೋವಿಡ್ ರೋಗಿಗಳು ಮತ್ತು ಶಂಕಿತರ ಮಾಹಿತಿ (ದತ್ತಾಂಶ) ಒದಗಿಸುವ ಕುರಿತು ಶಿವಶಂಕರ್ ಅಮೆರಿಕ ಮೂಲದ ‘ಸ್ಪ್ರಿಂಕ್ಲರ್’ ಸಂಸ್ಥೆ ಜತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪ ಮಾಡಿತ್ತು. ತ್ರಿಸದಸ್ಯ ಸಮಿತಿಯ ವರದಿಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್, ಈ ಕುರಿತು ನ್ಯಾಯಾಂಗ ತನಿಖೆಗೆ ಆಗ್ರಹಿಸಿದೆ.

ADVERTISEMENT

ಈ ಹಿಂದೆ ಚಿನ್ನ ಕಳ್ಳಸಾಗಣೆಯ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಅವರೊಂದಿಗೆ ನಂಟು ಹೊಂದಿದ್ದ ಆರೋಪದ ಮೇರೆಗೆ ಶಿವಶಂಕರ್ ಅವರನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.