ADVERTISEMENT

ಶೌಚಾಲಯದ ಪೈಪ್‌ನಲ್ಲಿ 6 ತಿಂಗಳ ಭ್ರೂಣ ಪತ್ತೆ

ಪಿಟಿಐ
Published 8 ಡಿಸೆಂಬರ್ 2024, 14:58 IST
Last Updated 8 ಡಿಸೆಂಬರ್ 2024, 14:58 IST
ಸಂಗ್ರಹ ಚಿತ್ರ 
ಸಂಗ್ರಹ ಚಿತ್ರ    

ಗಾಜಿಯಾಬಾದ್‌: ಮನೆಯೊಂದರ ಶೌಚಾಲಯದ ಪೈಪ್‌ನಲ್ಲಿ ಆರು ತಿಂಗಳ ಭ್ರೂಣವು ಪತ್ತೆಯಾಗಿದೆ. 

‘ನೀರಿನ ಒತ್ತಡದಿಂದಾಗಿ ಪೈಪ್‌ ಒಡೆದಾಗ ಅದರಲ್ಲಿ 6 ತಿಂಗಳ ಭ್ರೂಣವು ಪತ್ತೆಯಾಯಿತು’ ಎಂದು ಮನೆಯ ಮಾಲೀಕ ದೇವೇಂದ್ರ ಪೊಲೀಸರಿಗೆ ತಿಳಿಸಿದ್ದಾರೆ.

ಸ್ಥಳದಲ್ಲಿ ದೇವೇಂದ್ರ ಅವರು ಒಟ್ಟು 9 ಜನರಿಗೆ ಮನೆಗಳನ್ನು ಬಾಡಿಗೆ ನೀಡಿದ್ದಾರೆ. ಭ್ರೂಣವನ್ನು ಶೌಚಾಲಯದಲ್ಲಿ ಎಸೆದಿರುವುದು ಯಾರು ಎಂಬುದು ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಭ್ರೂಣವನ್ನು ಸಂರಕ್ಷಿಸಿದ್ದೇವೆ. ಸ್ಥಳದಲ್ಲಿ ವಾಸಿಸುವ ಎಲ್ಲರನ್ನೂ ವಿಚಾರಣೆಗೊಳಪಡಿಸಲಾಗಿದ್ದು, ಬಾಡಿಗೆದಾರರು ಹಾಗೂ ಭ್ರೂಣದ ಡಿಎನ್ಎ ಪರೀಕ್ಷೆ ನಡೆಸುವ ಮೂಲಕ ಅಪರಾಧಿಗಳನ್ನು ಪತ್ತೆಹಚ್ಚುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.