ದೆಹಲಿ ವಿಧಾನಸಭೆ
ಪಿಟಿಐ
ನವದೆಹಲಿ: ದೆಹಲಿಯಲ್ಲಿ 6 ಬಾರಿ ಬಿಜೆಪಿ ಶಾಸಕರಾಗರುವ ಮೋಹನ್ ಸಿಂಗ್ ಬಿಸ್ತ ದೆಹಲಿ ವಿಧಾನಸಭೆಯ ಉಪ ಸಭಾದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಮೋಹನ್ ಸಿಂಗ್ ಅವರ ಹೆಸರನ್ನು ಅನುಮೋದಿಸಿದರು.
ಮೋಹನ್ ಸಿಂಗ್ ಅವರು ಮುಸ್ತಾಫಬಾದ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ಎಎಪಿಯ ಅಹಮ್ಮದ್ ಖಾನ್ ಅವರನ್ನು 17 ಸಾವಿರ ಮತಗಳ ಅಂತರದಿಂದ ಸೋಲಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.