ADVERTISEMENT

ಹಿರಿಯ ಕಾಂಗ್ರೆಸ್‌ ನಾಯಕ ರಘುನಂದನ್‌ ಲಾಲ್‌ ಭಾಟಿಯಾ ನಿಧನ

ಪಿಟಿಐ
Published 15 ಮೇ 2021, 5:25 IST
Last Updated 15 ಮೇ 2021, 5:25 IST
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರೊಂದಿಗಿರುವ  ರಘುನಂದನ್‌ ಲಾಲ್‌ ಭಾಟಿಯಾ     –ಟ್ವಿಟರ್‌ ಚಿತ್ರ
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರೊಂದಿಗಿರುವ  ರಘುನಂದನ್‌ ಲಾಲ್‌ ಭಾಟಿಯಾ     –ಟ್ವಿಟರ್‌ ಚಿತ್ರ   

ಅಮೃತಸರ: ಹಿರಿಯ ಕಾಂಗ್ರೆಸ್‌ ನಾಯಕ, ಆರು ಬಾರಿ ಸಂಸದರಾಗಿದ್ದ ರಘುನಂದನ್‌ ಲಾಲ್‌ ಭಾಟಿಯಾ ಅವರು (100) ಅನಾರೋಗ್ಯದಿಂದ ಶುಕ್ರವಾರ ನಿಧನರಾದರು ಎಂದು ಅವರ ಕುಟುಂಬದ ಸದಸ್ಯರೊಬ್ಬರು ತಿಳಿಸಿದರು.

‘ಶುಕ್ರವಾರ ರಾತ್ರಿ ಅಮೃತಸರದ ಖಾಸಗಿ ಆಸ್ಪತ್ರೆಯಲ್ಲಿ ರಘುನಂದನ್‌ ಅವರು ಕೊನೆ ಉಸಿರೆಳೆದರು’ ಎಂದು ಅವರು ಹೇಳಿದರು.

ರಘುನಂದನ್‌ ಅವರು ಅಮೃತಸರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 1972ರಲ್ಲಿ ಮೊದಲ ಬಾರಿ ಲೋಕಸಭೆಗೆ ಚುನಾಯಿತರಾಗಿದ್ದರು. ಬಳಿಕ 1980, 1985, 1992, 1996 ಮತ್ತು 1999ರಲ್ಲೂ ಕಾಂಗ್ರೆಸ್‌ ‍‍ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದರು.

ADVERTISEMENT

1992ರಲ್ಲಿ ವಿದೇಶಾಂಗ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ ಅವರು, 2004ರಿಂದ 2008ರ ತನಕ ಕೇರಳ ಮತ್ತು 2008ರಿಂದ 2009ರ ತನಕ ಬಿಹಾರದ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.