
ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಗುಜರಾತ್, ಲಕ್ಷದ್ವೀಪ ಮತ್ತು ಪಾಂಡಿಚೇರಿಯಲ್ಲಿ ಒಟ್ಟು 69 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ಅಳಿಸಲಾಗಿದೆ. ಚುನಾವಣಾ ಆಯೋಗ ಶುಕ್ರವಾರ ಹಂಚಿಕೊಂಡಿರುವ ದತ್ತಾಂಶದಲ್ಲಿ ಈ ಮಾಹಿತಿ ಲಭ್ಯವಾಗಿದೆ.
ಗುಜರಾತ್, ಲಕ್ಷದ್ವೀಪ ಮತ್ತು ಪಾಂಡಿಚೇರಿಯಲ್ಲಿ ಇತ್ತೀಚೆಗೆ ಮತದಾರರ ಅಂತಿಮ ಪಟ್ಟಿ ಬಿಡುಗಡೆಯಾಗಿದೆ. ಎಸ್‌ಐಆರ್ ಘೋಷಣೆಗೂ ಮೊದಲು ಗುಜರಾತ್ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಒಟ್ಟು ಮತದಾರರ ಸಂಖ್ಯೆ 5.19 ಕೋಟಿ ಇತ್ತು. ಎಸ್‌ಐಆರ್ ನಂತರ ಈ ಸಂಖ್ಯೆ 4.50 ಕೋಟಿಗೆ ಇಳಿಕೆಯಾಗಿದೆ.
ಗುಜರಾತ್‌ನಲ್ಲಿ 5.08 ಕೋಟಿಯಷ್ಟಿದ್ದ ಮತದಾರರ ಸಂಖ್ಯೆ 4.40 ಕೋಟಿಗೆ ಇಳಿಕೆಯಾಗಿದೆ. ಲಕ್ಷದ್ವೀಪದಲ್ಲಿ 57,813ರಿಂದ 57,607ಕ್ಕೆ ಮತ್ತು ಪಾಂಡಿಚೇರಿಯಲ್ಲಿ 10.21 ಲಕ್ಷದಿಂದ 9.44 ಲಕ್ಷಕ್ಕೆ ಇಳಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.