ADVERTISEMENT

ಡ್ಯಾನಿಷ್ ಸಿದ್ಧಿಕಿ ಪೋಷಕರಿಂದ ತಾಲಿಬಾನ್ ವಿರುದ್ಧ ಕಾನೂನು ಹೋರಾಟ

ತಾಲಿಬಾನ್ ವಿರುದ್ಧ ಅಂತರರಾಷ್ಟ್ರೀಯ ನ್ಯಾಯಾಲಯದ ಮೊರೆ ಸಾಧ್ಯತೆ

ಪಿಟಿಐ
Published 21 ಮಾರ್ಚ್ 2022, 14:06 IST
Last Updated 21 ಮಾರ್ಚ್ 2022, 14:06 IST
ಡ್ಯಾನಿಷ್ ಸಿದ್ಧಿಕಿ
ಡ್ಯಾನಿಷ್ ಸಿದ್ಧಿಕಿ   

ನವದೆಹಲಿ: ಅಫ್ಗಾನಿಸ್ತಾನದಲ್ಲಿ ಹತ್ಯೆಗೀಡಾದ ಭಾರತದ ಖ್ಯಾತ ಪತ್ರಿಕಾ ಛಾಯಾಗ್ರಾಹಕ ಡ್ಯಾನಿಷ್ ಸಿದ್ಧಿಕಿ ಅವರ ಪೋಷಕರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಡ್ಯಾನಿಷ್ ಅವರ ಸಾವಿಗೆ ಕಾರಣರಾದ ಉನ್ನತ ಮಟ್ಟದ ಕಮಾಂಡರ್‌ಗಳು ಮತ್ತು ತಾಲಿಬಾನ್ ಸರ್ಕಾರದ ನಾಯಕರನ್ನು ಕಾನೂನು ವ್ಯಾಪ್ತಿಗೆ ತಂದು ಶಿಕ್ಷೆಗೆ ಗುರಿಪಡಿಸಲು ಡ್ಯಾನಿಷ್ ಪೋಷಕರು ನಿರ್ಧರಿಸಿದ್ದಾರೆ.

ಮಂಗಳವಾರದಿಂದಲೇ ಕಾನೂನು ಹೋರಾಟ ಆರಂಭಿಸಲಾಗುತ್ತದೆ ಎಂದು ಡ್ಯಾನಿಷ್ ಅವರ ಕುಟುಂಬ ಹೇಳಿಕೆ ಬಿಡುಗಡೆ ಮಾಡಿದೆ.ಆದರೆ ಯಾವ ರೀತಿಯ ಕಾನೂನು ಹೋರಾಟ ಆರಂಭಿಸಲಿದೆ ಎಂದು ಡ್ಯಾನಿಷ್ ಕುಟುಂಬ ಬಹಿರಂಗಪಡಿಸಿಲ್ಲ. ಸದ್ಯ ಅಫ್ಗಾನಿಸ್ತಾನದ ತಾಲಿಬಾನ್ ವಿರುದ್ಧ ಡ್ಯಾನಿಷ್ ಅವರ ಕುಟುಂಬ ಅಂತರರಾಷ್ಟ್ರೀಯ ಮೊರೆ ಹೋಗಲಿದೆ ಎನ್ನಲಾಗಿದೆ.

ಸಿದ್ಧಿಕಿ ಅವರು 2021ರ ಜುಲೈನಲ್ಲಿ ಅಫ್ಗಾನಿಸ್ತಾನ ಸೇನೆ ಮತ್ತು ತಾಲಿಬಾನ್ ನಡುವಿನ ಯುದ್ಧವನ್ನು ವರದಿ ಮಾಡುತ್ತಿದ್ದಾಗ ಕಂದಹಾರ್‌ನ ಸ್ಪಿನ್ ಬೋಲ್ಡಾಕ್‌ ಎಂಬಲ್ಲಿ ಹತ್ಯೆಗೀಡಾಗಿದ್ದರು. ಆದರೆ ಆ ಬಳಿಕ ತಾಲಿಬಾನ್ ಉಗ್ರರು ಉದ್ಧೇಶಪೂರ್ವಕವಾಗಿ ಕೊಲೆ ಮಾಡಿದ್ದಾರೆ ಎನ್ನಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.