ADVERTISEMENT

ಎ.ಸಿ ಬೋಗಿಯಲ್ಲಿ ಹೊಗೆ: ಸಿಕಂದರಾಬಾದ್‌ – ಅಗರ್ತಲಾ ಎಕ್ಸ್‌ಪ್ರೆಸ್‌ ರೈಲು ಸ್ಥಗಿತ

ಪಿಟಿಐ
Published 6 ಜೂನ್ 2023, 12:39 IST
Last Updated 6 ಜೂನ್ 2023, 12:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಭುವನೇಶ್ವರ : ಸಿಕಂದರಾಬಾದ್‌ – ಅಗರ್ತಲಾ ಎಕ್ಸ್‌ಪ್ರೆಸ್‌ ರೈಲಿನ ಎ.ಸಿ ಬೋಗಿಯೊಳಗೆ ಮಂಗಳವಾರ ಹೊಗೆ ಕಾಣಿಸಿ, ಪ್ರಯಾಣಿಕರು ಪ್ರಯಾಣ ಮುಂದುವರಿಸಲು ನಿರಾಕರಿಸಿದ್ದರಿಂದ ಆ ರೈಲನ್ನು ಒಡಿಶಾದ ಬ್ರಹ್ಮಾಪುರ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೋಗಿಯ ಹವಾ ನಿಯಂತ್ರಣ ವ್ಯವಸ್ಥೆಯ ಘಟಕದ ಒಳಗಿನಿಂದ ಹೊಗೆ ಹೊರಸೂಸುತ್ತಿದ್ದ ಬಗ್ಗೆ ಪ್ರಯಾಣಿಕರು ನಸುಕಿನಲ್ಲಿ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಹೊಗೆ ನಿಯಂತ್ರಣಕ್ಕೆ ತರಲಾಯಿತು. ಆದರೆ, ಆತಂಕಕ್ಕೆ ಒಳಗಾದ ಪ್ರಯಾಣಿಕರು ಆ ಬೋಗಿಯಲ್ಲಿ ಪ್ರಯಾಣ ಮುಂದುವರಿಸಲು ನಿರಾಕರಿಸಿದರು. ಅವರೆಲ್ಲರೂ ಬೋಗಿ ಬದಲಿಸುವಂತೆ ಬೇಡಿಕೆ ಇಟ್ಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿ-5 ಸಂಖ್ಯೆಯ ಬೋಗಿಯಲ್ಲಿ ಹೊಗೆ ಬರುತ್ತಿದ್ದುದನ್ನು ಮೊದಲಿಗೆ ಕೆಲವು ಪ್ರಯಾಣಿಕರು ಗಮನಿಸಿ, ಎಚ್ಚರಿಸಿದರು. ಬಳಿಕ ರೈಲಿನಿಂದ ಕೆಳಗಿಳಿದ ಹೆಚ್ಚಿನ ಪ್ರಯಾಣಿಕರು, ಪುನಃ ಆ ಬೋಗಿಗೆ ಹತ್ತಲು ನಿರಾಕರಿಸಿದರು. ಆ ಬೋಗಿಯಲ್ಲಿ ವಿದ್ಯುತ್‌ಉಪಕರಣಕ್ಕೆ ಸಂಬಂಧಿಸಿ ಸಣ್ಣ ಸಮಸ್ಯೆ ತಲೆದೋರಿದ ಬಗ್ಗೆ ವರದಿಯಾಗಿತ್ತು. ಕರ್ತವ್ಯದಲ್ಲಿದ್ದ ಸಿಬ್ಬಂದಿ ತಕ್ಷಣವೇ ಸಮಸ್ಯೆ ಪತ್ತೆ ಹಚ್ಚಿ ಅದನ್ನು ಸರಿಪಡಿಸಿದ್ದಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.