ADVERTISEMENT

ಬಾಲ ಕಾರ್ಮಿಕ ಪದ್ಧತಿ ಕಂಡುಬಂದಲ್ಲಿ ದೂರು ಸಲ್ಲಿಸಿ: ಸ್ಮೃತಿ ಇರಾನಿ

ಪಿಟಿಐ
Published 12 ಜೂನ್ 2021, 11:19 IST
Last Updated 12 ಜೂನ್ 2021, 11:19 IST
ಸ್ಮೃತಿ ಇರಾನಿ
ಸ್ಮೃತಿ ಇರಾನಿ   

ನವದೆಹಲಿ: ‘ಬಾಲ ಕಾರ್ಮಿಕ ಪದ್ಧತಿಯ ನಿದರ್ಶನಗಳು ಕಂಡುಬಂದಲ್ಲಿ ಪೆನ್ಸಿಲ್‌ ಪೋರ್ಟಲ್‌ ಅಥವಾ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ತಿಳಿಸಬೇಕು’ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ನಾಗರಿಕರಲ್ಲಿ ಶನಿವಾರ ಮನವಿ ಮಾಡಿದ್ದಾರೆ.

ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಟ್ವೀಟ್‌ ಮಾಡಿರುವ ಅವರು, ‘ ಪ್ರತಿ ಮಗುವಿಗೆ ಸಂತೋಷಕರ ಬಾಲ್ಯ ಮತ್ತು ಶಿಕ್ಷಣ ಪಡೆಯುವ ಹಕ್ಕಿದೆ. ಈ ದಿನದಂದು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ. ನಾವೆಲ್ಲರೂ ಜತೆಯಾಗಿ ಮಕ್ಕಳಿಗೆ ಉತ್ತಮ ಬಾಲ್ಯವನ್ನು ಕೊಡಬಹುದು. ಉತ್ತಮ ಬಾಲ್ಯವನ್ನು ಹೊಂದುವ ಅರ್ಹತೆ ಎಲ್ಲಾ ಮಕ್ಕಳಿಗೂ ಇದೆ’ ಎಂದು ಟ್ವೀಟ್‌ ಮಾಡಿದ್ದಾರೆ.

‘ಎಲ್ಲಾದರೂ ಬಾಲ ಕಾರ್ಮಿಕ ಪದ್ಧತಿ ಕಂಡು ಬಂದರೆ, ಈ ಬಗ್ಗೆ ಪೆನ್ಸಿಲ್‌ ಪೋರ್ಟಲ್‌ http://pencil.gov.in ಅಥವಾ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ದೂರ ಸಲ್ಲಿಸಬೇಕು. ನಮ್ಮ ಮಕ್ಕಳು ಮತ್ತು ದೇಶದ ಭವಿಷ್ಯಕ್ಕಾಗಿ ನಾವು ಈ ಕೆಲಸವನ್ನು ಮಾಡಬೇಕಿದೆ’ ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.