ADVERTISEMENT

ಸ್ಥಳೀಯ ಮುಖಂಡನ ಆತ್ಮಹತ್ಯೆ: ವೆಳ್ಳಾಪಳ್ಳಿ ನಟೇಶನ್ ಸೇರಿ ಮೂವರ ವಿರುದ್ಧ ಪ್ರಕರಣ

ಪಿಟಿಐ
Published 1 ಡಿಸೆಂಬರ್ 2022, 14:28 IST
Last Updated 1 ಡಿಸೆಂಬರ್ 2022, 14:28 IST
ವೆಳ್ಳಾಪಳ್ಳಿ ನಟೇಶನ್‌
ವೆಳ್ಳಾಪಳ್ಳಿ ನಟೇಶನ್‌   

ಆಲಪ್ಪುಳ: ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂನ (ಎಸ್‌ಎನ್‌ಡಿಪಿ) ಸ್ಥಳೀಯ ಮುಖಂಡ ಕೆ.ಕೆ. ಮಹೇಶನ್‌ ಎಂಬುವವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ವೆಳ್ಳಾಪಳ್ಳಿ ನಟೇಶನ್‌, ಅವರ ಮಗ ತುಷಾರ್‌ ವೆಳ್ಳಾಪಳ್ಳಿ ಸೇರಿದಂತೆ ಮೂವರ ವಿರುದ್ಧ ಪೊಲೀಸರು ಗುರುವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎರಡು ವರ್ಷಗಳ ಹಿಂದೆ ನಡೆದಿದ್ದ ಆತ್ಮಹತ್ಯೆ ಪ್ರಕರಣದಲ್ಲಿ ನಟೇಶನ್‌, ತುಷಾರ್‌ ಹಾಗೂ ಅವರ ಆಪ್ತ ಕೆ.ಎಲ್‌. ಅಶೋಕನ್‌ ಎಂಬುವರು ಆರೋಪಿಗಳು ಎಂದು ಆಳಪ್ಪುಳದ ನ್ಯಾಯಾಲಯವು ಘೋಷಿಸಿದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದೂ ನ್ಯಾಯಾಲಯ ನಿರ್ದೇಶನ ನೀಡಿತ್ತು.

ADVERTISEMENT

‘ನಟೇಶನ್‌ ಹಾಗೂ ಇತರರು ನೀಡಿರುವ ಮಾನಸಿಕ ಕಿರುಕುಳದಿಂದ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿ ಮಹೇಶನ್‌ ಅವರ ಪತ್ನಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ವೆಳ್ಳಾಪಳ್ಳಿ ನಟೇಶನ್‌, ‘ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ನಾನು ಮುಂದುವರಿಯಬಾರದು ಎಂಬ ಕಾರಣಕ್ಕೆ ವಿರೋಧಿಗಳು ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.