ಮುಂಬೈ(ಪಿಟಿಐ): ‘ಸಂಘದ ಶಾಖೆಗಳಲ್ಲಿ ಬಾಲಕರು ಮತ್ತು ಬಾಲಕಿಯರು ಒಟ್ಟಾಗಿ ಪಾಲ್ಗೊಳ್ಳಬೇಕು ಎಂಬ ಬಗ್ಗೆ ಬೇಡಿಕೆಗಳು ಬಂದಿಲ್ಲ. ಸಮಾಜ ಕೂಡ ಇಂತಹ ಬೇಡಿಕೆ ಮುಂದಿಟ್ಟಲ್ಲ’ ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್ ಬುಧವಾರ ಹೇಳಿದ್ದಾರೆ.
‘ಇಂತಹ ಬೇಡಿಕೆ ಬಂದಲ್ಲಿ, ಸಂಘದ ಸಂರಚನೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲಾಗುವುದು’ ಎಂದಿದ್ದಾರೆ.
ಅವರು ‘ಇಂಡಿಯಾ ಟುಡೆ ಸಮಾವೇಶ’ದಲ್ಲಿ ಮಾತನಾಡಿದರು.
‘ಸಂಘಟನೆಯಲ್ಲಿ ಮಹಿಳೆಯರು ಉನ್ನತ ಸ್ಥಾನಗಳಲ್ಲಿ ಏಕೆ ಇಲ್ಲ’ ಎಂಬ ಪ್ರಶ್ನೆಗೆ, ‘ಮೂಲಭೂತವಾಗಿ ಸಂಘದ ಶಾಖೆಗಳು ಬಾಲಕರಿಗಾಗಿ ಕಾರ್ಯನಿರ್ವಹಿಸುತ್ತಿವೆ. ಮಹಿಳೆಯರೇ ಇರುವ ರಾಷ್ಟ್ರ ಸೇವಿಕಾ ಸಮಿತಿಯು 1930ರಿಂದಲೇ ಅಸ್ತಿತ್ವದಲ್ಲಿದ್ದು, ಆರ್‌ಎಸ್‌ಎಸ್‌ನಂತೆಯೇ ಕಾರ್ಯ ನಿರ್ವಹಿಸುತ್ತಿದೆ’ ಎಂದು ಉತ್ತರಿಸಿದ್ದಾರೆ.
‘ಪುರುಷರ ವ್ಯಕ್ತಿತ್ವ ರೂಪಿಸುವುದು ಹಾಗೂ ರಾಷ್ಟ್ರ ನಿರ್ಮಾಣವೇ ಆರ್‌ಎಸ್‌ಎಸ್ ಗುರಿ. ಹೀಗಾಗಿ ಸಂಘದ ಶಾಖೆಗಳಲ್ಲಿ ಪುರುಷರೇ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.