ADVERTISEMENT

ಗಾಂಧಿ ಸಿದ್ದಾಂತ ಅಳಿಸುವ ಯತ್ನ: ಮೇಧಾ ಪಾಟ್ಕರ್‌

ಪಿಟಿಐ
Published 2 ಅಕ್ಟೋಬರ್ 2023, 11:47 IST
Last Updated 2 ಅಕ್ಟೋಬರ್ 2023, 11:47 IST
<div class="paragraphs"><p>ಮೇಧಾ ಪಾಟ್ಕರ್‌</p></div>

ಮೇಧಾ ಪಾಟ್ಕರ್‌

   

ಥಾಣೆ: ಮಹಾತ್ಮ ಗಾಂಧಿಯವರ ಬೋಧನೆ ಮತ್ತು ಸಿದ್ದಾಂತವನ್ನು ಅಳಿಸಿ ಹಾಕಲು ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ. ಆದರೆ ಅವುಗಳು ಜನರ ಹೃದಯ ಮತ್ತು ಮನಸ್ಸಿನಲ್ಲಿ ಅಚ್ಚೊತ್ತಿಕೊಂಡಿವೆ ಎಂದು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಹೇಳಿದರು.

ಗಾಂಧಿ ಜಯಂತಿ ಪ್ರಯುಕ್ತ ಇಲ್ಲಿನ ಮಹಾತ್ಮ ಗಾಂಧಿ ಉದ್ಯಾನದಲ್ಲಿರುವ ಗಾಂಧೀಜಿ ಪ್ರತಿಮೆಗೆ ಗೌರವ ನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾಗರಿಕರ ಹಕ್ಕುಗಳನ್ನು ನಿರಾಕರಿಸುವ ಉದ್ದೇಶದಿಂದ ಸಂವಿಧಾನ ಬದಲಾಯಿಸುವ ಪ್ರಯತ್ನಗಳೂ ನಡೆಯುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

‘ಗಾಂಧೀಜಿಯ ಭೌತಿಕ ರಚನೆಗಳನ್ನು ಧ್ವಂಸಗೊಳಿಸಬಹುದು, ಆದರೆ ಅವರ ಬೋಧನೆಗಳನ್ನು ಅಳಿಸಿ ಹಾಕಲು ಸಾಧ್ಯವಿಲ್ಲ. ಗಾಂಧೀಜಿಯ ಬೋಧನೆಗಳು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಅಚ್ಚೊತ್ತಿವೆ. ಗಾಂಧೀಜಿ ಅವರ ‘ಗ್ರಾಮ ಸ್ವರಾಜ್‌’ ಕಲ್ಪನೆ ಉತ್ಕೃಷ್ಟವಾಗಿದೆ’ ಎಂದು ಹೇಳಿದರು.

ಈ ವೇಳೆ ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಮಾತನಾಡಲು ನಿರಾಕರಿಸಿದ ಅವರು, ‘ಸಂಕೀರ್ಣವಾದದು’ ಎಂದಷ್ಟೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.