ADVERTISEMENT

ವಾಂಗ್ಚೂಕ್‌ ಬಂಧನ ಪ್ರಶ್ನಿಸಿ ಪತ್ನಿ ಗೀತಾಂಜಲಿ ಅರ್ಜಿ: ವಿಚಾರಣೆ ಮುಂದಕ್ಕೆ

ಪಿಟಿಐ
Published 5 ಫೆಬ್ರುವರಿ 2026, 11:12 IST
Last Updated 5 ಫೆಬ್ರುವರಿ 2026, 11:12 IST
   

ನವದೆಹಲಿ: ಪರಿಸರ ಕಾರ್ಯಕರ್ತ ಸೊನಮ್‌ ವಾಂಗ್ಚೂಕ್‌ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಬಂಧಿಸಿರುವುದನ್ನು ಪ್ರಶ್ನಿಸಿ ಪತ್ನಿ ಗೀತಾಂಜಲಿ ಆಂಗ್ಮೊ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಫೆ.8ಕ್ಕೆ ಮುಂದೂಡಿತು.

ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್‌ ಮತ್ತು ಪಿ.ಬಿ. ವರಾಳೆ ಅವರ ಪೀಠವು ಗುರುವಾರ ವಿಚಾರಣೆಯನ್ನು ಮುಂದೂಡಿತು. ‘ವಾಂಗ್ಚೂಕ್‌ ಅವರ ಆರೋಗ್ಯ ಸ್ಥಿತಿಯು ತೀರಾ ಹದಗೆಟ್ಟಿದೆ. ಅವರ ಬಂಧನದ ಕುರಿತು ಮತ್ತೊಮ್ಮೆ ಯೋಚಿಸಿ’ ಎಂದು ಬುಧವಾರ ವಿಚಾರಣೆ ನಡೆಸಿದ್ದ ಪೀಠವು ಕೇಂದ್ರ ಸರ್ಕಾರವನ್ನು ಆಗ್ರಹಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT