ADVERTISEMENT

ಬುಡಕಟ್ಟು ಜನರ ಸಾವಿನ ಸಂಖ್ಯೆ 10ಕ್ಕೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 19:45 IST
Last Updated 18 ಜುಲೈ 2019, 19:45 IST
   

ಲಖನೌ: ಸೋನೆಭದ್ರ ಜಿಲ್ಲೆಯಲ್ಲಿ ಬುಧವಾರ ನಡೆದ ಹತ್ಯಾಕಾಂಡದಲ್ಲಿ ಸತ್ತ ಬುಡಕಟ್ಟು ಜನರ ಸಂಖ್ಯೆ ಗುರುವಾರ 10ಕ್ಕೆ ಏರಿದೆ. ಭೂವ್ಯಾಜ್ಯ ಸಂಬಂಧ ನಡೆದ ಸಂಘರ್ಷದಲ್ಲಿ ಗಾಯಗೊಂಡಿದ್ದ ಮತ್ತೊಬ್ಬರು ಗುರುವಾರ ಮೃತಪಟ್ಟರು. ಬುಧವಾರದ ಸಂಘರ್ಷದಲ್ಲಿ ಸ್ಥಳದಲ್ಲಿಯೇ ಎಂಟು ಮಂದಿ ಸತ್ತಿದ್ದರು. ಒಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಉತ್ತರ ಪ್ರದೇಶದ ಸೋನೆಭದ್ರ ಜಿಲ್ಲೆಯಉಂಬಾ ಗ್ರಾಮದಲ್ಲಿ ನಡೆದ ಈ ಘಟನೆ ಇತ್ತೀಚಿನ ದಶಕದ ಅತ್ಯಂತ ಭೀಕರ ಹತ್ಯಾಕಾಂಡ ಎನಿಸಿಕೊಂಡಿದೆ.

ಗುರ್ಜರ್ ಸಮುದಾಯದ ಮುಖಂಡ ಹಾಗೂ ಆತನ ಬೆಂಬಲಿಗರು ಗ್ರಾಮಸ್ಥರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಗೊಂಡ ಬುಡಕಟ್ಟು ಸಮುದಾಯಕ್ಕೆ ಸೇರಿದ 10 ಮಂದಿಯ ಹತ್ಯೆ ಬಳಿಕಇಡೀ ಗ್ರಾಮವೇ ಪೊಲೀಸರ ಭದ್ರಕೋಟೆಯಾಗಿ ಮಾರ್ಪಟ್ಟಿದೆ.ಗಲಭೆಯಲ್ಲಿ 25ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಅವರಲ್ಲಿ ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದೆ. ಪೊಲೀಸರು ಈವರೆಗೆ 25 ಜನರನ್ನು ಬಂಧಿಸಿದ್ದು, 50ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಾಗಿದೆ.

‘ಪಿಸ್ತೂಲು, ಲಾಠಿ ಹೊಂದಿದ್ದ 200 ಜನರ ಗುಂಪು, 32 ಟ್ರ್ಯಾಕ್ಟರ್‌ಗಳಲ್ಲಿ ಗ್ರಾಮವನ್ನು ಪ್ರವೇಶಿಸಿತ್ತು. ಇದು ಪೂರ್ವ ನಿಯೋಜಿತ ಕೃತ್ಯ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಘಟನೆ ಸಂಬಂಧ ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ಆಗ್ರಹಿ
ಸಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಅಜಯ್ ಸಿಂಗ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿ
ಸಿತು.ಮೃತರ ಸಂಬಂಧಿಕರಿಗೆ ತಲಾ ₹25 ಲಕ್ಷ ಪರಿಹಾರಕ್ಕೆ ಆಗ್ರಹಿಸಿತು.

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಎಸ್‌ಸಿ, ಎಸ್‌ಟಿ ಆಯೋಗ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.