ADVERTISEMENT

ಸೋನು ಸೂದ್‌ಗೆ ಬಾಲಕಿಯ ಮನವಿ: ನನ್ನ ಅಮ್ಮನನ್ನು ಅಜ್ಜಿ ಮನೆಗೆ ಕಳುಹಿಸುತ್ತೀರಾ?

ಏಜೆನ್ಸೀಸ್
Published 31 ಮೇ 2020, 9:55 IST
Last Updated 31 ಮೇ 2020, 9:55 IST
ಸೋನು ಸೂದ್
ಸೋನು ಸೂದ್   

ಮುಂಬೈ: ಲಾಕ್‍ಡೌನ್ ವೇಳೆ ವಿವಿಧ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸುವ ಮೂಲಕ ಬಾಲಿವುಡ್ ನಟ ಸೋನು ಸೂದ್ ದೇಶದ ಜನರ ಮನಗೆದ್ದಿದ್ದಾರೆ.

ಜನರು ಎಲ್ಲಿ ಸಿಕ್ಕಿಹಾಕಿಕೊಂಡಿದ್ದರೂ ಅವರನ್ನು ಸುರಕ್ಷಿತವಾಗಿ ಅವರವರ ಜಾಗಕ್ಕೆ ತಲುಪಿಸುವ ಕಾರ್ಯ ಮಾಡುತ್ತಿರುವ ಸೋನುನಲ್ಲಿ ಬ್ಯೂಟಿ ಪಾರ್ಲರ್‌ಗೆ ತಲುಪಿಸಲು ಸಹಾಯ ಮಾಡುತ್ತೀರಾ? ಮದ್ಯದಂಗಡಿಗೆ ಹೋಗಲು ನೆರವು ನೀಡುತ್ತೀರಾ? ಎಂಬ ಪ್ರಶ್ನೆಗಳನ್ನು ಜನರು ಕೇಳಿದ್ದರು.

ಇದೀಗ ಪುಟ್ಟ ಹುಡುಗಿಯೊಬ್ಬಳು ಅವಳಪ್ಪನ ಪರವಾಗಿಸೋನುನಲ್ಲಿ ಸಹಾಯ ಬೇಡಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ADVERTISEMENT

ಟ್ವಿಟರ್‌ನಲ್ಲಿ ಅಪ್‍ಲೋಡ್ ಆಗಿರುವ ವಿಡಿಯೊದಲ್ಲಿ ಪುಟ್ಟ ಹುಡುಗಿ ಈ ರೀತಿ ಮನವಿ ಮಾಡಿದ್ದಾಳೆ. 'ಸೋನು ಅಂಕಲ್, ನೀವು ಜನರನ್ನು ಮನೆಗೆ ಕಳುಹಿಸುತ್ತಿದ್ದೀರಿ ಎಂದು ಕೇಳಿದ್ದೀನಿ.ಹಾಗಾಗಿ ಅಪ್ಪ ಕೇಳುತ್ತಿದ್ದಾರೆ, ಅಮ್ಮನನ್ನು ಅಜ್ಜಿ ಮನೆಗೆ ಕಳುಹಿಸುತ್ತೀರಾ' ಎಂದು. ಈ ವಿಡಿಯೊವನ್ನು ಸೋನು ರೀಟ್ವೀಟ್ ಮಾಡಿ ಇದು ತುಂಬಾ ಸವಾಲಿನ ಕೆಲಸ. ನಾನು ಪ್ರಯತ್ನಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ವಲಸೆ ಕಾರ್ಮಿಕರನ್ನು ಮನೆಗೆ ಕಳುಹಿಸುವ ಕಾರ್ಯವನ್ನು ಮಾಡುತ್ತಿರುವ ಸೋನು, ಈಗ ನಿಜವಾದ ಹೀರೊ ಎಂದು ಮೆಚ್ಚುಗೆ ಗಳಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.