ADVERTISEMENT

ಸೊರೇನ್‌ ವಾಟ್ಸ್‌ಆ್ಯಪ್‌ ಸಂದೇಶ ಬಹಿರಂಗಪಡಿಸಿದ ಇ.ಡಿ.

ಪಿಟಿಐ
Published 7 ಫೆಬ್ರುವರಿ 2024, 18:07 IST
Last Updated 7 ಫೆಬ್ರುವರಿ 2024, 18:07 IST
<div class="paragraphs"><p>ಹೇಮಂತ್ ಸೊರೇನ್‌</p></div>

ಹೇಮಂತ್ ಸೊರೇನ್‌

   

(ಪಿಟಿಐ ಚಿತ್ರ)

ರಾಂಚಿ (ಪಿಟಿಐ): ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಅವರ ನಿಕಟವರ್ತಿಯೊಬ್ಬರ ನಡುವಿನ ವಾಟ್ಸ್‌ಆ್ಯಪ್‌ ಸಂದೇಶದ ವಿವರಗಳನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಹಣದ ಅಕ್ರಮ ವರ್ಗಾವಣೆ ತಡೆ ನ್ಯಾಯಾಲಯಕ್ಕೆ ಸಲ್ಲಿಸಿದೆ.

ADVERTISEMENT

ರಾಜ್ಯ ಸರ್ಕಾರದ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆ ಬಗ್ಗೆ ಇದರಲ್ಲಿ ಚರ್ಚಿಸಲಾಗಿದೆ. ಭಾರಿ ಮೊತ್ತದ ಹಣದ ವಹಿವಾಟನ್ನು ಇದು ಒಳಗೊಂಡಿದೆ ಎಂದು ಆರೋಪಿಸಲಾಗಿದೆ.

ನ್ಯಾಯಾಲಯವು ಸೊರೇನ್ ಅವರನ್ನು ಇನ್ನೂ ಐದು ದಿನಗಳ ಮಟ್ಟಿಗೆ ಇ.ಡಿ. ವಶಕ್ಕೆ ಒಪ್ಪಿಸಿದೆ. ಸೊರೇನ್ ಅವರನ್ನು ಜನವರಿ 31ರಂದು ಬಂಧಿಸಲಾಗಿದೆ. ಸೊರೇನ್ ಅವರಿಗೆ ಸಂಬಂಧಿಸಿದ ಹಲವು ಆಸ್ತಿಗಳ ಬಗ್ಗೆ ವಿವರಗಳು ಲಭ್ಯವಾಗಿವೆ, ಆದರೆ ಅವುಗಳ ಬಗ್ಗೆ ಸೊರೇನ್ ಅವರು ಮಾಹಿತಿ ನೀಡುತ್ತಿಲ್ಲ ಎಂದು ಇ.ಡಿ. ಅಧಿಕಾರಿಗಳು ಕೋರ್ಟ್‌ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.