ADVERTISEMENT

ಧ್ವನಿವರ್ಧಕಗಳಿಗೆ ಮಿತಿ: ಆಜಾನ್ ಪ್ರಸಾರಕ್ಕೆ ಡಿಜಿಟಲ್ ಮಾರ್ಗ ಕಂಡುಕೊಂಡ ಮಸೀದಿಗಳು

ಪಿಟಿಐ
Published 29 ಜೂನ್ 2025, 5:35 IST
Last Updated 29 ಜೂನ್ 2025, 5:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಧ್ವನಿವರ್ದಕಗಳ ಬಳಕೆಗೆ ಮಿತಿ ಹೇರಿರುವ ಕಾರಣ ಮುಂಬೈನ ಹಲವು ಮಸೀದಿಗಳು ಜನರಿಗೆ 'ಆಜಾನ್‌' ಕೇಳಿಸಲು ಡಿಜಿಟಲ್‌ ಮಾರ್ಗದ ಮೊರೆಹೋಗಿವೆ. 'ಆನ್‌ಲೈನ್‌ ಆಜಾನ್‌' ಹೆಸರಿನ ಮೊಬೈಲ್‌ ಆ್ಯಪ್‌ ಮೂಲಕ ಪ್ರಾರ್ಥನೆಯನ್ನು ಪ್ರಸಾರ ಮಾಡಲು ಮುಂದಾಗಿವೆ.

ತಮಿಳುನಾಡು ಮೂಲದ ಕಂಪನಿ ಈ ಅಪ್ಲಿಕೇಷನ್‌ ಅನ್ನು ಅಭಿವೃದ್ಧಿಪಡಿಸಿದೆ.

'ಆಜಾನ್‌ ಕೂಗಲು ಧ್ವನಿವರ್ಧಕಗಳಿಗೆ ಮಿತಿ ಇರುವುದರಿಂದ, ಜನರು ಆ್ಯಪ್‌ ಮೂಲಕ ಪ್ರಾರ್ಥನೆಯನ್ನು ಮನೆಯಿಂದಲೇ ಆಲಿಸಲು ಅನುಕೂಲವಾಗಲಿದೆ. ಈ ಆ್ಯಪ್ ಉಚಿತ ಬಳಕೆಗೆ ಲಭ್ಯವಿದೆ' ಎಂದು ಮಹೀಮ್‌ ಜುಮಾ ಮಸೀದಿಯ ಟ್ರಸ್ಟಿ ಫಹಾದ್‌ ಖಲೀಲ್‌ ಪಠಾಣ್ ಹೇಳಿದ್ದಾರೆ.

ADVERTISEMENT

'ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದಂತೆ ಪೊಲೀಸರು ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಈ ಮಾರ್ಗವನ್ನು ಕಂಡುಕೊಳ್ಳಲಾಗಿದೆ. ಜುಮಾ ಮಸೀದಿಗೆ ಇತ್ತೀಚೆಗೆ ಭೇಟಿ ನೀಡಿದ್ದ ಅಧಿಕಾರಿಗಳು ಧ್ವನಿವರ್ಧಕಗಳನ್ನು ಬಳಸಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಅದರಿಂದಾಗಿ, ಪ್ರಾರ್ಥನೆ ಕೂಗುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು' ಎಂದು ಪಠಾಣ್‌ ತಿಳಿಸಿದ್ದಾರೆ.

ಆಧ್ಯಾತ್ಮಿಕತೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು, ವಿಶೇಷವಾಗಿ ವೃದ್ಧರು ಮತ್ತು ಮಾಹಿಮ್ ಪ್ರದೇಶದ ಸ್ಥಳೀಯರಿಗಾಗಿ ಜುಮಾ ಮಸೀದಿಯು ಈ ಅಪ್ಲಿಕೇಶನ್ ಅನ್ನು ಅಳವಡಿಸಿಕೊಂಡಿದೆ ಎಂದು ಮಾಹಿತಿ ನಿಡಿದ್ದಾರೆ.

ತಮಿಳುನಾಡಿನ ತಿರುನೆಲ್ವೇಲಿಯ ಐಟಿ ತಂತ್ರಜ್ಞರು ಅಭಿವೃದ್ಧಿಪಡಿಸಿರುವ ಈ ಆ್ಯಪ್‌ನಲ್ಲಿ ಮುಂಬೈನ ಒಟ್ಟು ಆರು ಮಸೀದಿಗಳು ನೋಂದಣಿ ಮಾಡಿಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.