ADVERTISEMENT

ಜನರು ನೋವಿನಲ್ಲಿರುವಾಗ ಕೇಂದ್ರ ಸರ್ಕಾರ ನಿದ್ರಿಸುತ್ತಿದೆ: ರಾಹುಲ್‌ ವಾಗ್ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಡಿಸೆಂಬರ್ 2021, 8:33 IST
Last Updated 4 ಡಿಸೆಂಬರ್ 2021, 8:33 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ಜನರ ಸಂಕಷ್ಟಕ್ಕೆ ಸ್ಪಂದಿಸದ ಕೇಂದ್ರ ಸರ್ಕಾರವು ನಿದ್ರಿಸುತ್ತಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

#SpeakUpForCovidNyay ಎಂಬ ಹ್ಯಾಶ್‌ಟ್ಯಾಗ್‌ ಬಳಸಿ ಶನಿವಾರ ಟ್ವೀಟ್‌ ಮಾಡಿರುವ ಅವರು, ‘ಜನರು ನೋವು ಮತ್ತು ಸಂಕಷ್ಟದಲ್ಲಿರುವಾಗ ಭಾರತ ಸರ್ಕಾರವು ನಿದ್ರಿಸುತ್ತಿದೆ. ಬನ್ನಿ ಅವರನ್ನು ಎಬ್ಬಿಸೋಣ‘ ಎಂದು ತಿಳಿಸಿದ್ದಾರೆ.

#SpeakUpForCovidNyay ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ದೇಶದಾದ್ಯಂತ ಟ್ವಿಟರ್‌ ಅಭಿಯಾನವನ್ನು ಕಾಂಗ್ರೆಸ್‌ ಆರಂಭಿಸಿದೆ.

ADVERTISEMENT

ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌ ಘಟಕವು, ‘ದೇಶಕ್ಕೆ ಕೊರೊನಾ ಸೋಂಕು ವಕ್ಕರಿಸಿದ ಮೊದಲ ದಿನದಿಂದಲೂ ಜನರನ್ನು ಪ್ರತಿ ಹಂತದಲ್ಲೂ ಜೀವ ಹಿಂಡಿದ್ದು ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು.ಬೆಡ್, ವೆಂಟಿಲೇಟರ್, ಆಮ್ಲಜನಕ, ಕೊನೆಗೆ ಸ್ಮಶಾನದಲ್ಲಿಯೂ ಜನರನ್ನು ಸಾಲಿನಲ್ಲಿ ನಿಲ್ಲಿಸಿದರು. ಸರ್ಕಾರದ ಬೇಜವಾಬ್ದಾರಿಯಿಂದಾಗಿ ಪ್ರಾಣ ಬಿಟ್ಟವರ ಕುಟುಂಬಗಳಿಗೆ ₹4 ಲಕ್ಷ ಪರಿಹಾರ ನೀಡಲೇಬೇಕು‘ ಎಂದು ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.