ADVERTISEMENT

ದೆಹಲಿ | ಸ್ಪೈಸ್ ಜೆಟ್ ವಿಮಾನದಲ್ಲಿ ಅಗ್ನಿ ಅವಘಡ; ಅಪಾಯದಿಂದ ಪಾರಾದ ಸಿಬ್ಬಂದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜುಲೈ 2023, 16:35 IST
Last Updated 25 ಜುಲೈ 2023, 16:35 IST
ಸ್ಪೈಸ್ ಜೆಟ್ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ
ಸ್ಪೈಸ್ ಜೆಟ್ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ   

ನವದೆಹಲಿ: ಇಂಜಿನ್ ನಿರ್ವಹಣಾ ಕಾರ್ಯದ ವೇಳೆ ಸ್ಪೈಸ್ ಜೆಟ್ ವಿಮಾದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ನಿರ್ವಹಣಾ ಸಿಬ್ಬಂದಿ ಪ್ರಾಣಾ‍ಪಾಯದಿಂದ ಪಾರಾಗಿದ್ದಾರೆ ಎಂದು ಸ್ಪೈಸ್ ಜೆಟ್ ಕಂಪನಿ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದೆ.

ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ವಿಮಾನದ ಇಂಜಿನ್‌ ನಿರ್ವಹಣಾ ಕೆಲಸ ನಡೆಯುತ್ತಿದ್ದು, ಈ ವೇಳೆ ಅಗ್ನಿ ಅವಘಡ ಸಂಭವಿಸಿದೆ.

ವಿಮಾನಕ್ಕೆ ಬೆಂಕಿ ಹೊತ್ತಿರುವ ದೃಶ್ಯವನ್ನು ಪ್ರಯಾಣಿಕರೊಬ್ಬರು ಸೆರೆ ಹಿಡಿದಿದ್ದು, ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಿಂತ ವಿಮಾನದ ಸುತ್ತಮುತ್ತ ದಟ್ಟ ಹೊಗೆ ಕಾಣಿಸಿಕೊಂಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ADVERTISEMENT

'ಮಂಗಳವಾರ ಸ್ಪೈಸ್‌ಜೆಟ್ Q400 ವಿಮಾನದ ಇಂಜಿನ್‌ ನಿರ್ವಹಣೆ ಕಾರ್ಯ ನಡೆಯುತಿತ್ತು. ವಿಮಾನದ ಒಂದು ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ನಿರ್ವಹಣಾ ಸಿಬ್ಬಂದಿಯ ಗಮನಕ್ಕೆ ಬಂದಿದೆ. ತಕ್ಷಣ ಎಚ್ಚೆತ್ತ ಅವರು ಬೆಂಕಿ ನಂದಿಸಲು ಕಾರ್ಯಪ್ರವೃತ್ತರಾದರು. ಅಗ್ನಿಶಾಮಕದ ದಳದ ಸಹಾಯದಿಂದ ಬೆಂಕಿ ನಂದಿಸಲಾಯಿತು' ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.