ADVERTISEMENT

ಸೂರತ್‌| ಭಾರಿ ಮಳೆ, ಗಾಳಿ: ರನ್‌ ವೇಯಿಂದ ಹೊರ ಹೋದ ವಿಮಾನ, ಪ್ರಯಾಣಿಕರು ಸುರಕ್ಷಿತ

ಪಿಟಿಐ
Published 1 ಜುಲೈ 2019, 13:39 IST
Last Updated 1 ಜುಲೈ 2019, 13:39 IST
ಸ್ಪೈಸ್‌ಜೆಟ್‌ ವಿಮಾನ
ಸ್ಪೈಸ್‌ಜೆಟ್‌ ವಿಮಾನ   

ಸೂರತ್‌: ಭಾನುವಾರ ಭೋಪಾಲ್‌ನಿಂದ ಬಂದಿಳಿದ ಸ್ಪೈಸ್‌ಜೆಟ್‌ ವಿಮಾನ ಸೂರತ್‌ ವಿಮಾನ ನಿಲ್ದಾಣದಲ್ಲಿ ರನ್‌ ವೇಯಿಂದ ಹೊರಹೋಗಿದ್ದು, ಕೆಲಹೊತ್ತು ಆತಂಕ ಉಂಟಾಗಿತ್ತು.

ಭಾರಿ ಮಳೆ ಮತ್ತು ಗಾಳಿಯಿಂದಾಗಿ ರಾತ್ರಿ 8.15ರ ವೇಳೆಯಲ್ಲಿ ಈ ಘಟನೆ ನಡೆದಿದೆ. ವಿಮಾನದಲ್ಲಿದ್ದ 43 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವಿಮಾನ ನಿಲ್ದಾಣ ನಿರ್ದೇಶಕಪನಿಗ್ರಾಹಿ ತಿಳಿಸಿದ್ದಾರೆ.

ಘಟನೆಯಿಂದಾಗಿ ಭಾನುವಾರ ರಾತ್ರಿ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.