ADVERTISEMENT

ಕೋವಿಡ್-19 ಲಸಿಕೆ: ಮೊದಲ ಡೋಸ್‌ ಪಡೆದ ದಲೈಲಾಮಾ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 9:33 IST
Last Updated 6 ಮಾರ್ಚ್ 2021, 9:33 IST
   

ಧರ್ಮಶಾಲಾ: ಕೋವಿಡ್-‌19 ಲಸಿಕೆಯ ಮೊದಲ ಡೋಸ್‌ ಪಡೆದ ಬೌದ್ಧಧರ್ಮಗುರು ದಲೈಲಾಮಾ ಅವರು, ʼಹೆಚ್ಚಿನ ಪ್ರಯೋಜನಕ್ಕಾಗಿʼ ಲಸಿಕೆ ಹಾಕಿಸಿಕೊಳ್ಳುವಂತೆ ಶನಿವಾರ ಜನರಲ್ಲಿ ಮನವಿ ಮಾಡಿದರು.

ʼಗಂಭೀರ ತೊಂದರೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ, ಈ ಚುಚ್ಚುಮದ್ದು ತುಂಬಾ ಉಪಕಾರಿ ಮತ್ತು ಉತ್ತಮವಾದುದು. ಇತರ ರೋಗಿಗಳೂ ಹೆಚ್ಚಿನ ಪ್ರಯೋಜನಕ್ಕಾಗಿ ಈ ಚುಚ್ಚುಮದ್ದು ಪಡೆಯಬಹುದು. ನಾನು ಅದನ್ನು ತೆಗೆದುಕೊಂಡಿದ್ದೇನೆ. ಜನರು ಈ ಚುಚ್ಚುಮದ್ದು ಹಾಕಿಸಿಕೊಳ್ಳುವ ಧೈರ್ಯ ಮಾಡಬೇಕುʼ ಎಂದು ಕರೆ ನೀಡಿದರು.

86 ವರ್ಷದ ಲಾಮಾ ಅವರು ಕಳೆದ ವರ್ಷ ಜನವರಿಯಿಂದಲೂಸ್ವಯಂ ಪ್ರತ್ಯೇಕವಾಸದಲ್ಲಿ ಉಳಿದಿದ್ದರು. ಶನಿವಾರ ತಮ್ಮ ನಿವಾಸದಿಂದ ಹೊರಬಂದು,ಇಲ್ಲಿನ ವಲಯ ಆಸ್ಪತ್ರೆಯಲ್ಲಿ ಬೆಳಗ್ಗೆ 7.10ಕ್ಕೆ ಲಸಿಕೆ ಹಾಕಿಸಿಕೊಂಡರು. ಬಳಿಕ ಸುಮಾರು ಅರ್ಧ ತಾಸು ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿತ್ತು.

ADVERTISEMENT

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಇದುವರೆಗೆ 57,428 ಸೋಂಕಿತರು ಇದುವರೆಗೆ ಗುಣಮುಖರಾಗಿದ್ದು, 997 ಮಂದಿ ಮೃತಪಟ್ಟಿದ್ದಾರೆ. ಇನ್ನೂ 589 ಕೋವಿಡ್-‌19 ಸಕ್ರಿಯ ಪ್ರಕರಣಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.