ADVERTISEMENT

‘ಸ್ಪುಟ್ನಿಕ್‌ ಲೈಟ್‌’ ಸಿಂಗಲ್‌ ಡೋಸ್‌ ಲಸಿಕೆಗೆ ಡಿಸಿಜಿಐ ಅನುಮೋದನೆ

ಐಎಎನ್ಎಸ್
Published 7 ಫೆಬ್ರುವರಿ 2022, 11:35 IST
Last Updated 7 ಫೆಬ್ರುವರಿ 2022, 11:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಭಾರತದಲ್ಲಿ ತುರ್ತು ಸಂದರ್ಭದಲ್ಲಿಬಳಸಲು ‘ಸ್ಪುಟ್ನಿಕ್ ಲೈಟ್’ ಲಸಿಕೆಗೆ ಭಾರತೀಯ ಔಷಧ ನಿಯಂತ್ರಕರು (ಡಿಸಿಜಿಐ) ಅನುಮತಿ ನೀಡಿದ್ದಾರೆ.‘ಸ್ಪುಟ್ನಿಕ್ ಲೈಟ್’ ಒಂದು ಡೋಸ್ ಲಸಿಕೆಯಾಗಿದೆ ಎಂದುಡಾ. ರೆಡ್ಡೀಸ್‌ ಲ್ಯಾಬ್‌ ಸೋಮವಾರ ತಿಳಿಸಿದೆ.

ಭಾರತದಲ್ಲಿ ‘ಸ್ಪುಟ್ನಿಕ್‌– ವಿ’ ಲಸಿಕೆಯ ತುರ್ತು ಬಳಕೆಗೆ ಡಿಸಿಜಿಐ2021ರ ಏಪ್ರಿಲ್‌ನಲ್ಲಿ ಅನುಮೋದನೆ ನೀಡಿತ್ತು.‘ಸ್ಪುಟ್ನಿಕ್ ಲೈಟ್’ ಲಸಿಕೆಯ 3ನೇ ಹಂತದ ಕ್ಲಿನಿಕಲ್ ಪ್ರಯೋಗದ ಬಳಿಕ, ರೆಡ್ಡೀಸ್‌ ಲ್ಯಾಬ್‌ ಡಿಸಿಜಿಐ ಅನುಮೋದನೆಗೆ ಅರ್ಜಿ ಸಲ್ಲಿಸಿತ್ತು. ರಷ್ಯಾದಲ್ಲಿ ಈ ಲಸಿಕೆಯ ಕುರಿತು ನಡೆದಿದ್ದ ಕ್ಲಿನಿಕಲ್‌ ಪ್ರಯೋಗಗಳ ದತ್ತಾಂಶವನ್ನೂ ಅರ್ಜಿಯೊಂದಿಗೆ ಲಗತ್ತಿಸಿತ್ತು.

ಸ್ಪುಟ್ನಿಕ್‌–ವಿ ಲಸಿಕೆಯು ಕೋವಿಡ್‌ನ ಓಮೈಕ್ರಾನ್‌ ರೂಪಾಂತರ ತಳಿಯ ವಿರುದ್ಧ ಪ್ರತಿಕಾಯಗಳನ್ನು ಬೆಳೆಸುವುದರಲ್ಲಿ ಪರಿಣಾಮಕಾರಿಯಾಗಿದೆ ಎಂದು ‘ಗಮಾಲೆ ಸೆಂಟರ್‌’ ಇತ್ತೀಚಿನ ಪ್ರಯೋಗಗಳು ತಿಳಿಸಿವೆ. ‘ಸ್ಪುಟ್ನಿಕ್‌ ಲೈಟ್‌’ ಲಸಿಕೆಯನ್ನು ‘ಬೂಸ್ಟರ್’ ಆಗಿ ಬಳಸಬಹುದಾಗಿದೆ ಎನ್ನಲಾಗಿದೆ.

ADVERTISEMENT

ಅರ್ಜೆಂಟೀನಾ, ಯುಎಇ, ಫಿಲಿಪ್ಪೀನ್ಸ್‌ ಮತ್ತು ರಷ್ಯಾ ಸೇರಿದಂತೆ ವಿಶ್ವದ 30 ದೇಶಗಳಲ್ಲಿ ‘ಸ್ಪುಟ್ನಿಕ್ ಲೈಟ್’ ಬಳಕೆಗೆ ಅನುಮೋದನೆ ದೊರೆತಿದೆ.

‘ಸ್ಪುಟ್ನಿಕ್‌– ವಿ’ ಲಸಿಕೆಯ ಕ್ಲಿನಿಕಲ್‌ ಪ್ರಯೋಗ ಮತ್ತು ಭಾರತದಲ್ಲಿ ಈ ಲಸಿಕೆಯನ್ನು ವಿತರಿಸುವ ಪಾಲುದಾರಿಕೆಯನ್ನುಡಾ. ರೆಡ್ಡೀಸ್‌ ಲ್ಯಾಬ್‌ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.