ADVERTISEMENT

ಕೇರಳ ವಿಧಾನಸಭೆ ಚುನಾವಣೆ | ಇ.ಶ್ರೀಧರನ್‌ ಪ್ರಭಾವ ಸಾಧಾರಣ: ಶಶಿ ತರೂರ್‌

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 14:42 IST
Last Updated 21 ಫೆಬ್ರುವರಿ 2021, 14:42 IST
ಶಶಿ ತರೂರ್
ಶಶಿ ತರೂರ್   

ನವದೆಹಲಿ (ಪಿಟಿಐ): ‘ಮೆಟ್ರೊ ಮ್ಯಾನ್‌’ ಖ್ಯಾತಿಯ ಇ.ಶ್ರೀಧರನ್‌ ಅವರು ಬಿಜೆಪಿ ಸೇರ್ಪಡೆಯಾದರೂ ಕೇರಳ ವಿಧಾನಸಭೆ ಚುನಾವಣೆ ಮೇಲೆ ಅವರ ಪ್ರಭಾವ ಹೆಚ್ಚು ಗಂಭೀರವಾಗಿರುವುದಿಲ್ಲ. ರಾಜ್ಯದ ಕೆಲವೇ ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿದರೆ ಬಿಜೆಪಿ ಕೇರಳದಲ್ಲಿ ಪ್ರಬಲ ಸ್ಪರ್ಧಿಯಲ್ಲ‘ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಶಶಿ ತರೂರ್‌ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.

'2016ರ ವಿಧಾನಸಭೆ ಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದ ತನ್ನ ಕಾರ್ಯಕ್ಷಮತೆಯನ್ನು ಸುಧಾರಿಸುವುದು ಬಿಜೆಪಿಗೆ ಬಹಳ ಕಷ್ಟಕರ. ಚುನಾವಣೆಯಲ್ಲಿ ಇ.ಶ್ರೀಧರನ್‌ ಅವರ ಪ್ರಭಾವ ಬಿಜೆಪಿ ಸೇರಿದ್ದಾರೆ ಎಂಬುದಕ್ಕಷ್ಟೇ ಸೀಮಿತವಾಗಿರಲಿದೆ’ ಎಂದು ಟೀಕಿಸಿದ್ದಾರೆ.

‘ಇ.ಶ್ರೀಧರನ್‌ ಅವರ ರಾಜಕೀಯ ಕ್ಷೇತ್ರದ ಪ್ರವೇಶ ಹಾಗೂ ಬಿಜೆಪಿ ಸೇರ್ಪಡೆ ವಿಚಾರ ಕೇಳಿ ತುಂಬಾ ಆಶ್ಚರ್ಯವಾಯಿತು’ ಎಂದು ಹೇಳಿರುವ ಅವರು, ’ತಂತ್ರಜ್ಞರು ಅವರ ಕ್ಷೇತ್ರದಲ್ಲಿ ಎಷ್ಟೇ ಸಾಧನೆ ಮಾಡಿದ್ದರೂ, ನೀತಿ ನಿರೂಪಣೆ ಅವರಿಂದ ಸಾಧ್ಯವಿಲ್ಲ. ಇದೊಂದು ವಿಭಿನ್ನ ಜಗತ್ತು. ಶ್ರೀಧರನ್ ಅವರಿಗೆ ಯಾವುದೇ ರಾಜಕೀಯ ಅನುಭವ ಅಥವಾ ಹಿನ್ನೆಲೆ ಇಲ್ಲ, ಮುಂದಿನ ವಿಧಾನಸಭೆ ಚುನಾವಣೆ ಮೇಲೆ ಅವರ ಪರಿಣಾಮ ಕ್ಷುಲ್ಲಕವಾಗಿರುತ್ತದೆ‘ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.