ADVERTISEMENT

ಶ್ರೀಲಂಕಾ: ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ನಿರಾಶ್ರಿತರ ಭೇಟಿಗೆ ನಿರಾಕರಣೆ

ಪಿಟಿಐ
Published 29 ಡಿಸೆಂಬರ್ 2024, 16:01 IST
Last Updated 29 ಡಿಸೆಂಬರ್ 2024, 16:01 IST
   

ಕೊಲಂಬೊ: ಸೇನಾ ಶಿಬಿರದಲ್ಲಿರುವ ರೋಹಿಂಗ್ಯಾ ನಿರಾಶ್ರಿತರನ್ನು ಭೇಟಿ ಮಾಡಲು ಅನುಮತಿ ನಿರಾಕರಿಸಲಾಗಿದೆ ಎಂದು ದೂರಿ ಶ್ರೀಲಂಕಾದ ಮಾನವ ಹಕ್ಕುಗಳ ಆಯೋಗವು ಅಧ್ಯಕ್ಷ ಅನುರ ಕುಮಾರ ಡಿಸ್ಸನಾಯಿಕೆ ಅವರಿಗೆ ಪತ್ರ ಬರೆದಿದೆ.

ಉತ್ತರ ಪ್ರಾಂತ್ಯದ ಮುಲ್ಲೈತೀವುನಲ್ಲಿರುವ ವಾಯುಪಡೆಯ ಶಿಬಿರದಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರ ಪರಿಸ್ಥಿತಿಯನ್ನು ಪರಿಶೀಲಿಸಲು ಆಯೋಗದ ತಂಡವು ಡಿ. 26ರಂದು ಪ್ರಯತ್ನಿಸಿದಾಗ, ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.

ದ್ವೀಪದ ಈಶಾನ್ಯ ಕರಾವಳಿಯ ಸಮುದ್ರದಲ್ಲಿ ಸಂಕಷ್ಟದ ಸ್ಥಿತಿಯಲ್ಲಿದ್ದ ಮ್ಯಾನ್ಮಾರ್‌ನ 100ಕ್ಕೂ ಹೆಚ್ಚು ರೋಹಿಂಗ್ಯಾಗಳನ್ನು ರಕ್ಷಿಸಲಾಗಿದೆ ಎಂದು ನೌಕಾಪಡೆಯು ಡಿ. 20ರಂದು ತಿಳಿಸಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.