ADVERTISEMENT

ಎಸ್‌ಆರ್‌ಎಂ ವಿ.ವಿಯಲ್ಲಿ ಎಂ.ಟೆಕ್‌: ₹ 72 ಸಾವಿರ ಶಿಷ್ಯವೇತನ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 14:20 IST
Last Updated 30 ಏಪ್ರಿಲ್ 2022, 14:20 IST

ಗುಂಟೂರು: ಆಂಧ್ರ ಪ್ರದೇಶದ ಎಸ್‌ಆರ್‌ಎಂ ವಿಶ್ವವಿದ್ಯಾಲಯ–ಎಪಿ, ಎಂ.ಟೆಕ್ ಕೋರ್ಸ್‌ಗೆ ಶೇ 100ರಷ್ಟು ಬೋಧನಾ ಶುಲ್ಕ ಮನ್ನಾದೊಂದಿಗೆ ವಾರ್ಷಿಕ ₹72 ಸಾವಿರ ಶಿಷ್ಯವೇತನ ನೀಡುತ್ತಿದೆ.

ಎಂ.ಟೆಕ್‌ ಕೋರ್ಸ್‌ಗೆ ಸೇರುವ ವಿದ್ಯಾರ್ಥಿಗಳಿಗೆ ಕೈಗಾರಿಕಾ ಸಹಯೋಗದೊಂದಿಗೆ ಅತ್ಯಾಧುನಿಕ ಸಂಶೋಧನಾ ಯೋಜನೆಗಳಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗುತ್ತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ವಿಶ್ವವಿದ್ಯಾಲಯವು ಉದ್ಯಮ ಪ್ರಮಾಣಿತ ಪ್ರಯೋಗಾಲಯಗಳನ್ನು ಹೊಂದಿದ್ದು, ಇವುಗಳ ಮೂಲಕ ವಿದ್ಯಾರ್ಥಿಗಳನ್ನು ಉದ್ಯಮಕ್ಕೆ ಸಿದ್ಧರಾಗುವಂತೆ ಮಾಡಲಾಗುತ್ತಿದೆ ಎಂದಿದೆ.

ADVERTISEMENT

ಇಲ್ಲಿಕಂಪ್ಯೂಟರ್‌ ಸೈನ್ಸ್ ಎಂಜಿನಿಯರಿಂಗ್‌, ಎಲೆಕ್ಟಾನಿಕ್ಸ್‌ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್‌, ಮೆಕ್ಯಾನಿಕಲ್ ಎಂಜಿನಿಯರಿಂಗ್‌ ವಿಷಯಗಳಲ್ಲಿ ಎಂ.ಟೆಕ್‌ ಕೋರ್ಸ್‌ ಮಾಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.