ADVERTISEMENT

ದೆಹಲಿ ಸೇವಾ ನಿಯಂತ್ರಣ ಮಸೂದೆ: ಪ್ರಜಾಪ್ರಭುತ್ವದ ‘ಕರಾಳ’ ದಿನ ಎಂದ ಸ್ಟಾಲಿನ್

ಪಿಟಿಐ
Published 8 ಆಗಸ್ಟ್ 2023, 12:39 IST
Last Updated 8 ಆಗಸ್ಟ್ 2023, 12:39 IST
ತಮಿಳು ನಾಡು ಸಿಎಂ, ಎಂ.ಕೆ ಸ್ಟಾಲಿನ್
ತಮಿಳು ನಾಡು ಸಿಎಂ, ಎಂ.ಕೆ ಸ್ಟಾಲಿನ್   

ಚೆನ್ನೈ: ‘ದೆಹಲಿ ಸೇವಾ ನಿಯಂತ್ರಣ ಮಸೂದೆ’ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ದಿನ ಪ್ರಜಾಪ್ರಭುತ್ವದ ‘ಕರಾಳ ದಿನ‘ವಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಹೇಳಿದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ಸ್ಟಾಲಿನ್‌, ಬಿಜೆಪಿ ನೇತ್ರತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಮಸೂದೆ ಮೂಲಕ ರಾಷ್ಟ್ರದ ರಾಜಧಾನಿಯನ್ನು ಪುರಸಭೆ ಮಟ್ಟಕ್ಕೆ ಇಳಿಸಲಾಗಿದೆ ಎಂದು ಕಿಡಿಕಾರಿದ್ದಾರೆ.

‘ದೆಹಲಿ ಸೇವಾ ನಿಯಂತ್ರಣ ಮಸೂದೆ ಅಂಗೀಕಾರವಾದ ದಿನ ಪ್ರಜಾಪ್ರಭುತ್ವದ ಕರಾಳ ದಿನವಾಗಿದೆ. ಮಸೂದೆ ಅಂಗೀಕರಿಸುವ ಮೂಲಕ ಬಿಜೆಪಿಯು ತನ್ನ ಪ್ರಭುತ್ವದ ಮುಖವನ್ನು ತೋರಿಸಿದೆ. ರಾಜಧಾನಿಯಲ್ಲಿ ಬೇರೊಂದು ಪಕ್ಷ ಆಡಳಿತದಲ್ಲಿದ್ದರೆ ಈ ಮಸೂದೆಯು ಅದರ ಅಧಿಕಾರವನ್ನು ಕಸಿದುಕೊಳ್ಳುತ್ತದೆ’ ಎಂದು ಹೇಳಿದರು.

ADVERTISEMENT

‘ಮಣಿಪುರದಲ್ಲಿ ಹೊತ್ತಿರುವ ಬೆಂಕಿಯನ್ನು ನಂದಿಸಲು ಪ್ರಯತ್ನಿಸದೆ ದೆಹಲಿಯನ್ನು ನಾಶಮಾಡಲು ಹವಣಿಸುತ್ತಿದೆ. ಬಿಜೆಪಿಯ ತಂತ್ರಗಳ ಬಗ್ಗೆ ಜನರಿಗೆ ಅರಿವಿದೆ. ರಾಷ್ಟ್ರ ರಾಜಧಾನಿಯನ್ನು ಕೆಳಮಟ್ಟಕ್ಕೆ ಇಳಿಸಿದ ಪಿತೂರಿಗೆ ಜನತೆಯೇ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಹೇಳಿದರು.

ದೆಹಲಿ ಸೇವಾ ನಿಯಂತ್ರಣ ಮಸೂದೆ ರಾಜ್ಯಸಭೆಯಲ್ಲಿ 131:102 ಮತಗಳ ಅಂತರದಲ್ಲಿ ಸೋಮವಾರ ಅಂಗೀಕಾರವಾಯಿತು. ಲೋಕಸಭೆಯಲ್ಲಿ ಈಗಾಗಲೇ ಮಸೂದೆಗೆ ಅನುಮೋದನೆ ಸಿಕ್ಕಿದ್ದು, ರಾಷ್ಟ್ರಪತಿಗಳ ಅಂಕಿತ ಬಿದ್ದ ತಕ್ಷಣ ಮಸೂದೆ ಕಾಯ್ದೆಯಾಗಿ ಜಾರಿಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.