ADVERTISEMENT

ಮೀಸಲಾತಿ ಕುರಿತ ತೀರ್ಪು ಡಿಎಂಕೆಯ ದ್ರಾವಿಡ ಮಾದರಿಗೆ ಸಿಕ್ಕಿದ ಮನ್ನಣೆ: ಸ್ಟಾಲಿನ್

ಪಿಟಿಐ
Published 1 ಆಗಸ್ಟ್ 2024, 12:42 IST
Last Updated 1 ಆಗಸ್ಟ್ 2024, 12:42 IST
<div class="paragraphs"><p>ಎಂ.ಕೆ.ಸ್ಟಾಲಿನ್</p></div>

ಎಂ.ಕೆ.ಸ್ಟಾಲಿನ್

   

ಪಿಟಿಐ

ಚೆನ್ನೈ: ‘ಪರಿಶಿಷ್ಟರಲ್ಲಿ ಅತಿಹಿಂದುಳಿದವರನ್ನು ಗುರುತಿಸಿ ಒಳಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ’ ಎಂಬ ಸುಪ್ರೀಂ ಕೋರ್ಟಿನ ತೀರ್ಪು, ತುಳಿತಕ್ಕೊಳಗಾಗಿರುವವರಿಗೆ ಸಾಮಾಜಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳುವ ಡಿಎಂಕೆಯ ದ್ರಾವಿಡ ಮಾದರಿಗೆ ಸಿಕ್ಕಿದ ಮನ್ನಣೆಯಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದರು.

ADVERTISEMENT

ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಸ್ಟಾಲಿನ್, ‘ತಮಿಳುನಾಡಿನಲ್ಲಿ ಅರುಂತಥಿಯಾರ್ ಸಮುದಾಯಕ್ಕೆ ಒಳಮೀಸಲಾತಿ ನೀಡಿರುವುದನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವುದಕ್ಕೆ ಸಂತಸವಾಗಿದೆ’ ಎಂದರು.

‘ಒಳಮೀಸಲಾತಿಗೆ ಸಂಬಂಧಿಸಿದಂತೆ ಸಮಿತಿಯೊಂದನ್ನು ರಚಿಸಿ, ಅದು ಸಂಗ್ರಹಿಸಿದ ದತ್ತಾಂಶಗಳನ್ನು ಆಧರಿಸಿ ಅರುಂತಥಿಯಾರ್ ಸಮುದಾಯಕ್ಕೆ ಆಗಿನ ಮುಖ್ಯಮಂತ್ರಿ ಎಂ.ಕರುಣಾನಿಧಿ ಒಳಮೀಸಲಾತಿ ನೀಡಿದ್ದರು’ ಎಂದು ಇದೇ ವೇಳೆ ನೆನಪಿಸಿಕೊಂಡರು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದಲ್ಲಿ ಏಳು ನ್ಯಾಯಾಮೂರ್ತಿಗಳ ಪೀಠವು 2010ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ತೀರ್ಪು ಪಶ್ನಿಸಿ ಸಲ್ಲಿಸಲಾಗಿದ್ದ ಒಂದು ಅರ್ಜಿ ಸೇರಿ 23 ಅರ್ಜಿಗಳ ವಿಚಾರಣೆ ನಡೆಸಿ, ಈ ಐತಿಹಾಸಿಕ ತೀರ್ಪು ಅನ್ನು ಇಂದು ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.