ADVERTISEMENT

Coronavirus Update| ಇಲ್ಲಿದೆ ರಾಜ್ಯವಾರು ಶಂಕಿತರು, ಸೋಂಕಿತರು, ಮೃತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2020, 13:55 IST
Last Updated 19 ಮಾರ್ಚ್ 2020, 13:55 IST
   

ಜಗತ್ತನ್ನು ಆವರಿಸುತ್ತಿರುವ ಮಹಾಮಾರಿ ಕೊರೊನಾ ವೈರಸ್‌, ಸದ್ಯ ಭಾರತದಲ್ಲೂ ಸಾಂಕ್ರಾಮಿಕಗೊಂಡಿದೆ. ಜನವರಿ 30ರಂದು ಕೇರಳದಲ್ಲಿ ದೇಶದ ಮೊದಲ ಕೊರೊನಾ ವೈರಸ್‌ ಪ್ರಕರಣ ಪತ್ತೆಯಾದ ನಂತರ ಇಲ್ಲಿವರೆಗೆ ಅದು ಹಲವು ನಗರಗಳನ್ನು ಆವರಿಸಿದೆ.

ಚೀನಾದಲ್ಲಿ ಹುಟ್ಟಿಕೊಂಡು, ಸದ್ಯ ಇಡೀ ಜಗತ್ತಿಗೇ ತಲೆನೋವಾಗಿ ಪರಿಣಮಿಸಿರುವ ಕೊರೊನಾ ವೈರಸ್‌ಗೆ ಮದ್ದಿಲ್ಲ. ಹೀಗಾಗಿ ಸಾವಿರಾರು ಮಂದಿ ಇದಕ್ಕೆ ಸೋತು ಪ್ರಾಣ ಕಳೆದುಕೊಂಡಿದ್ದಾರೆ. ಚೀನಾದಲ್ಲಿ ಅಟ್ಟಹಾಸ ಮೆರೆದ ನಂತರ ಅದು ಇಟಲಿಯಲ್ಲಿ ಮರಣ ಮೃದಂಗ ಭಾರಿಸುತ್ತಿದೆ.

ಭಾರತದ ಮಟ್ಟಿಗೆ ಹೇಳುವುದಾದರೆ ಬೆಂಗಳೂರು, ಪುಣೆ, ದೆಹಲಿ, ಜೈಪುರ, ಆಗ್ರಾ, ಹೈದರಾಬಾದ್‌, ಜಮ್ಮು ಮತ್ತು ಕಾಶ್ಮೀರಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ.

ADVERTISEMENT

ಈ ಕೆಳಗಿನ ಪಟ್ಟಿ ದೇಶದಲ್ಲಿನ ಸೋಂಕಿತರು, ಶಂಕಿತರು, ಮೃತರ ಸಂಖ್ಯೆಗಳನ್ನು ತಿಳಿಸುತ್ತದೆ.

167: ಭಾರತದಲ್ಲಿ ಸದ್ಯ ಕೋವಿಡ್‌ ಸೋಂಕು ದೃಢಪಟ್ಟಿರುವವರ ಸಂಖ್ಯೆ

03: ದೇಶದಲ್ಲಿ ಕೋವಿಡ್‌ ಸೋಂಕಿನಿಂದ ಸತ್ತವರು

-ಕರ್ನಾಟಕ–1
-ದೆಹಲಿ – 1
-ಮಹಾರಾಷ್ಟ್ರ – 1
-ಪಂಜಾಬ್‌–1

ಕೊರೊನಾ ವೈರಸ್‌ ಸೋಂಕು ದೃಢವಾಗಿರುವ ರಾಜ್ಯಗಳು ಮತ್ತು ಸಂಖ್ಯೆಗಳು

-ಕೇರಳ 27 (ಇಬ್ಬರು ವಿದೇಶಿಯರೂ ಸೇರಿ)
-ಪಂಜಾಬ್‌ – 1
-ದೆಹಲಿ – 10
-ಜಮ್ಮು ಮತ್ತು ಕಾಶ್ಮೀರ –4
-ಲಡಾಕ್‌ – 8
-ರಾಜಸ್ಥಾನ – 4 (ಇಬ್ಬರು ವಿದೇಶಿಯರೂ ಸೇರಿ)
-ಉತ್ತರ ಪ್ರದೇಶ – 18 (ಒಬ್ಬ ವಿದೇಶಿ ಪ್ರಜೆಯೂ ಸೇರಿ)
-ಮಹಾರಾಷ್ಟ್ರ – 49 (ಮೂವರು ವಿದೇಶಿಯರನ್ನೂ ಸೇರಿ) (ದೇಶದಲ್ಲೇ ಅತಿ ಹೆಚ್ಚು ಪ್ರಕರಣ)
-ಕರ್ನಾಟಕ – 14
-ತಮಿಳುನಾಡು – 2
-ತೆಲಂಗಾಣ – 13 (ಇಬ್ಬರು ವಿದೇಶಿಯರೂ ಸೇರಿ)
-ಹರಿಯಾಣ – 16 (14 ಮಂದಿ ವಿದೇಶಿಯರೂ ಸೇರಿ )
-ಆಂಧ್ರಪ್ರದೇಶ – 1
-ಉತ್ತರಾಖಂಡ – 1
-ಒಡಿಶಾ – 1
-ಪಶ್ಚಿಮ ಬಂಗಾಳ – 1
-ಚಂಡೀಗಢ– 1
-ಚತ್ತೀಸಗಢ–1

14: ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.