ADVERTISEMENT

‘ಪುರುಷರನ್ನು ಸಂತಾನಶಕ್ತಿಹರಣ ಚಿಕಿತ್ಸೆಗೆ ಮನವೊಲಿಸಿ ಅಥವಾ ಕೆಲಸ ಬಿಡಿ’

ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಧ್ಯಪ್ರದೇಶ ಸರ್ಕಾರ ಎಚ್ಚರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಫೆಬ್ರುವರಿ 2020, 10:24 IST
Last Updated 21 ಫೆಬ್ರುವರಿ 2020, 10:24 IST
   

ಮಾರ್ಚ್ 31ರ ಒಳಗೆ ಕನಿಷ್ಠ ಒಬ್ಬ ಪುರುಷನಿಗಾದರೂ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿ ಅಥವಾ ಕೆಲಸ ಬಿಡಿ ಎಂದು ಮಧ್ಯಪ್ರದೇಶ ಸರ್ಕಾರವು ಪುರುಷ ಆರೋಗ್ಯ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದೆ.

ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾ ವೈದ್ಯಾಧಿಕಾರಿಗೆ ಯೋಜನೆಯ ಅನುಷ್ಠಾನದ ಹೊಣೆ ಹೊರಿಸಿರುವ ಮಧ್ಯಪ್ರದೇಶದ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ‘ಕೆಲಸ ಆಗದಿದ್ದರೆ ಸಂಬಳವಿಲ್ಲ’ ಎಂದು ಸ್ಪಷ್ಟವಾಗಿ ತಿಳಿಸಿದೆ.

2019–2020ರ ಸಾಲಿನಲ್ಲಿ ಒಬ್ಬ ಪುರುಷನನ್ನೂ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಮನವೊಲಿಸದಿದ್ದವರ ಕೆಲಸ ಉಳಿಯುವುದಿಲ್ಲ ಎಂಬ ಸಂದೇಶ ನೀಡಿದೆ. 2019–2020ರ ಆರ್ಥಿಕ ವರ್ಷವು ಮಾರ್ಚ್‌ 31ಕ್ಕೆ ಮುಗಿಯಲಿದೆ.

ADVERTISEMENT

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯನ್ನು ಆಧರಿಸಿ ಈ ಸೂಚನೆಯನ್ನು ಎನ್‌ಎಚ್‌ಎಂ ಹೊರಡಿಸಿದೆ. ಗುರಿ ಮುಟ್ಟಲು ವಿಫಲರಾದವರನ್ನು ಕಡ್ಡಾಯ ನಿವೃತ್ತಿಗೆ ಶಿಫಾರಸು ಮಾಡುವ ಎಚ್ಚರಿಕೆ ನೀಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.