ADVERTISEMENT

ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಿಲ್ಲದು: ರೈತ ನಾಯಕ ಜಗಜೀತ್‌ ಡಲ್ಲೇವಾಲ್‌

ಪಿಟಿಐ
Published 7 ಏಪ್ರಿಲ್ 2025, 13:18 IST
Last Updated 7 ಏಪ್ರಿಲ್ 2025, 13:18 IST
<div class="paragraphs"><p>ರೈತ ನಾಯಕ ಜಗಜಿತ್ ಸಿಂಗ್ ಡಲ್ಲೇವಾಲ್‌ – ಪಿಟಿಐ ಚಿತ್ರ</p></div>

ರೈತ ನಾಯಕ ಜಗಜಿತ್ ಸಿಂಗ್ ಡಲ್ಲೇವಾಲ್‌ – ಪಿಟಿಐ ಚಿತ್ರ

   

ಚಂಡೀಗಢ: ‘ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಒಪ್ಪುವವರೆಗೂ ರೈತರ ಪ‍್ರತಿಭಟನೆಗಳು ಮುಂದುವರಿಯಲಿವೆ’ ಎಂದು ರೈತ ಮುಖಂಡ ಜಗಜೀತ್‌ ಸಿಂಗ್‌ ಡಲ್ಲೇವಾಲ್‌ ಸೋಮವಾರ ಹೇಳಿದ್ದಾರೆ. ಅಲ್ಲದೇ, ಕೇಂದ್ರದ ನಾಯಕರ ಜತೆಗೆ ಮೇ 4ರಂದು ನಡೆಯಲಿರುವ ಸಭೆಯಲ್ಲಿ ರೈತ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದಿದ್ದಾರೆ. 

ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 131 ದಿನಗಳಿಂದ ನಡೆಸಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಡಲ್ಲೇವಾಲ್‌ ಭಾನುವಾರ ಕೊನೆಗೊಳಿಸಿದ್ದರು. ಬಳಿಕ ಆರೋಗ್ಯ ತಪಾಸಣೆಗಾಗಿ ಪಂಜಾಬ್‌ನ ಖನ್ನಾ ಎಂಬಲ್ಲಿ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. 

ADVERTISEMENT

ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಒಪ್ಪುವವರೆಗೂ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ ಎಂದಿದ್ದಾರೆ.

ಅಲ್ಲದೇ, ಪ್ರತಿಭಟನೆಗಳ ಭಾಗವಾಗಿ ಪಂಜಾಬ್‌ನ ವಿವಿಧೆಡೆ ಕಿಸಾನ್‌ ಪಂಚಾಯತ್‌ಗಳನ್ನೂ ಆಯೋಜಿಸಲಾಗುತ್ತದೆ. ಹೋರಾಟದ ಮುಂದಿನ ರೂಪುರೇಷೆಗಳನ್ನು ಸಂಯುಕ್ತ ಕಿಸಾನ್‌ ಮೋರ್ಚಾ, ಕಿಸಾನ್‌ ಮಜ್ದೂರ್‌ ಮೋರ್ಚಾ ಸಭೆ ನಡೆಸಿ ನಿರ್ಧರಿಸಲಿವೆ ಎಂದೂ ಹೇಳಿದ್ದಾರೆ. 

ಇದೇ ವೇಳೆ ಮೇ 4ರ ಸಭೆ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಅವರು, ರೈತ ನಾಯಕರು ಸಭೆಗೆ ಬರಲಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿಕೊಳ್ಳಲು ನಾವು ಅವಕಾಶ ನೀಡುವುದಿಲ್ಲ. ಸಭೆಗೆ ಹಾಜರಾಗಿ ನಮ್ಮ ಬೇಡಿಕೆಗಳನ್ನು ಬಲವಾಗಿ ಪ್ರತಿಪಾದಿಸಲಿದ್ದೇವೆ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.