ADVERTISEMENT

ರೈಲಿನಲ್ಲಿ ಪ್ರಯಾಣಿಕರು ಕದ್ದ ವಸ್ತುಗಳು 1.95 ಲಕ್ಷ ಟವೆಲ್, 81,736 ಬೆಡ್‌ಶೀಟ್!

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2018, 13:04 IST
Last Updated 4 ಅಕ್ಟೋಬರ್ 2018, 13:04 IST
   

ನವದೆಹಲಿ: ಕಳೆದ ವರ್ಷ 1.95 ಲಕ್ಷ ಟವೆಲ್, 81,736 ಬೆಡ್‌ಶೀಟ್, 55,573 ತಲೆದಿಂಬು ಕವರ್, 5,038 ತಲೆದಿಂಬು, 7,043 ಹೊದಿಕೆ- ಇದಿಷ್ಟು ವಸ್ತುಗಳನ್ನು ರೈಲು ಪ್ರಯಾಣಿಕರು ಕದ್ದಿದ್ದಾರೆ ಎಂದು ಪಶ್ಚಿಮ ರೈಲ್ವೆ ಹೇಳಿದೆ.ಇಷ್ಟೇ ಅಲ್ಲದೆ 200 ಟಾಯ್ಲೆಟ್ ಮಗ್, ಸರಿ ಸುಮಾರು 1,000 ನಲ್ಲಿಗಳು ಮತ್ತು 300ಕ್ಕಿಂತಲೂ ಹೆಚ್ಚು ಫ್ಲಶ್ ಪೈಪ್‍ಗಳನ್ನು ಪ್ರಯಾಣಿಕರು ಕದ್ದುಕೊಂಡು ಹೋಗಿದ್ದಾರೆ ಎಂದು ರೈಲ್ವೆ ಇಲಾಖೆ ಹೇಳಿದೆ.
ಟಾಯ್ಲೆಟ್ ಮಗ್, ಸೀಲಿಂಗ್ ಫ್ಯಾನ್, ಬೆಡ್ ಶೀಟ್, ತಲೆದಿಂಬು ಮತ್ತು ಅದರ ಕವರ್‍ ಗಳೇ ಹೆಚ್ಚು ಕಾಣೆಯಾಗುತ್ತವೆ.ಈ ವಸ್ತುಗಳು ಮಾತ್ರಲ್ಲದೆ ವಾಶ್‍ರೂಂನಲ್ಲಿರುವ ಶವರ್‌ಗಳು, ಕಿಟಿಕಿಯ ಗ್ರಿಲ್ಸ್ ಮತ್ತು ರೈಲ್ವೆ ಟ್ರ್ಯಾಕ್ ‌‍ಗಳನ್ನು ಕದ್ದಿದ್ದು 2017-18ರಲ್ಲಿ ರೈಲ್ವೆ ರಕ್ಷಣಾ ಪಡೆ ವಶಪಡಿಸಿಕೊಂಡ ಕದ್ದ ಮಾಲುಗಳ ಮೌಲ್ಯ ₹2.97 ಕೋಟಿ ಆಗಿದೆ ಎಂದು ಮುಂಬೈ ಮಿರರ್ ಪತ್ರಿಕೆ ವರದಿ ಮಾಡಿದೆ.

2018 ಏಪ್ರಿಲ್ - ಸಪ್ಟೆಂಬರ್ ಅವಧಿಯಲ್ಲಿ ಅಂದಾಜು 79,350 ಹ್ಯಾಂಡ್ ಟವೆಲ್, 27,545 ಬೆಡ್‍ ಶೀಟ್, 21,050 ತಲೆದಿಂಬು ಕವರ್, 2,150 ತಲೆದಿಂಬು ಮತತು 2,065 ಹೊದಿಕೆಗಳು ಕದಿಯಲ್ಪಟ್ಟಿವೆ.ಹೀಗೆ ಕಾಣೆಯಾದ ವಸ್ತುಗಳ ಮೌಲ್ಯ ₹62 ಲಕ್ಷ ಎಂದು ಸೆಂಟ್ರಲ್ ರೈಲ್ವೆಯ ಸಿಪಿಆರ್‌ಒ ಸುನಿಲ್ ಉದಾಸಿ ಹೇಳಿದ್ದಾರೆ.

ಇಲ್ಲಿನ ರತ್ಲಾಂ ನಿವಾಸಿಯೊಬ್ಬರು ರೈಲಿನಲ್ಲಿ ಮೂರು ಹೊದಿಕೆ, 6 ಬೆಡ್ ಶೀಟ್ ಮತ್ತು ಮೂರು ತಲೆದಿಂಬುಗಳನ್ನು ಕದಿಯಲೆತ್ನಿಸುತ್ತಿದ್ದಾಗ ಸಿಕ್ಕಿ ಬಿದ್ದ ಘಟನೆ ಸೋಮವಾರ ನಡೆದಿತ್ತು.ಬಾಂದ್ರ ಸ್ಟೇಷನ್‍ನಿಂದ ದೂರ ಪ್ರಯಾಣದ ರೈಲಿಗೆ ಹತ್ತಿದ್ದ ಆರೋಪಿ ಶಬ್ಬೀರ್ ರೋಟಿವಾಲ ಎಸಿ ಬೋಗಿಯಿಂದ ವಸ್ತುಗಳನ್ನು ಕದಿಯುವಾಗ ಸಿಕ್ಕಿ ಬಿದ್ದಿದ್ದರು.
ಪ್ರಯಾಣಿಕರು ವಸ್ತುಗಳನ್ನು ಕದಿಯುತ್ತಿದ್ದು, ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ ಭಾರತೀಯ ರೈಲ್ವೆಗೆ₹4,000 ಕೋಟಿ ನಷ್ಟವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.