ADVERTISEMENT

ಉತ್ತರ ಪ್ರದೇಶ | ಕಲ್ಲುಕ್ವಾರಿ ಕುಸಿತ: ಮೃತರ ಸಂಖ್ಯೆ 6ಕ್ಕೆ ಏರಿಕೆ

ಪಿಟಿಐ
Published 17 ನವೆಂಬರ್ 2025, 15:41 IST
Last Updated 17 ನವೆಂಬರ್ 2025, 15:41 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಸೋನ್‌ಭದ್ರ (ಉತ್ತರ ಪ್ರದೇಶ): ಇಲ್ಲಿನ ಕಲ್ಲುಕ್ವಾರಿ ಕುಸಿತದಿಂದಾಗಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದವರ ಪೈಕಿ ಮತ್ತೆ ಐದು ಮಂದಿಯ ಮೃತದೇಹವನ್ನು ಹೊರ ತೆಗೆಯಲಾಗಿದೆ. ಈ ಮೂಲಕ ಮೃತರ ಸಂಖ್ಯೆ ಸೋಮವಾರ 6ಕ್ಕೆ ಏರಿಕೆಯಾಗಿದೆ. 

ADVERTISEMENT

ಸೋನ್‌ಭದ್ರ ಜಿಲ್ಲಾಧಿಕಾರಿ ಬಿ.ಎನ್‌.ಸಿಂಗ್‌ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

‘ಕಲ್ಲು ಕ್ವಾರಿ ಕುಸಿತದ ಬಳಿಕ ಭಾನುವಾರ ಇಂದ್ರಜಿತ್‌ (30) ಎಂಬವರ ಮೃತದೇಹ ಪತ್ತೆಯಾಗಿತ್ತು. ನಂತರ ತಡರಾತ್ರಿ ಕಾರ್ಯಾಚರಣೆ ನಡೆಸಿ, ಸಂತೋಷ್‌ ಯಾದವ್‌ (30), ರವೀಂದ್ರ ಅಲಿಯಾಸ್‌ ನಾಯಕ್‌ (18), ರಾಮ್‌ಖೇಲವನ್‌ (32), ಕೃಪಾಶಂಕರ್‌ ಎಂಬವರ ಮೃತದೇಹವನ್ನು ಅವಶೇಷಗಳ ಅಡಿಯಿಂದ ಹೊರಗೆ ತೆಗೆಯಲಾಗಿದೆ. ಸೋಮವಾರ ರಾಜು ಸಿಂಗ್‌ ಎಂಬವರ ಮೃತದೇಹ ಪತ್ತೆಯಾಗಿದೆ’ ಎಂದು ಸಿಂಗ್‌ ತಿಳಿಸಿದ್ದಾರೆ.

ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ವೇಳೆ ಈ ದುರಂತ ಸಂಭವಿಸಿದೆ. ಅವಶೇಷಗಳ ಅಡಿಯಲ್ಲಿ ಇನ್ನೂ ಹಲವರು ಸಿಲುಕಿರುವ ಶಂಕೆ ಇದ್ದು, ಮೃತರ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದರು.

ಜತೆಗೆ ಗಣಿಗಾರಿಕೆ ನಡೆಸುತ್ತಿದ್ದ ಸಂಸ್ಥೆ ಕೃಷ್ಣ ಮೈನಿಂಗ್‌ ವರ್ಕ್ಸ್‌ ಮಾಲಿಕ ಹಾಗೂ ಆತನ ಇಬ್ಬರು ಪಾಲುದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಮೂವರನ್ನು ಬಂಧಿಸಬೇಕಿದೆ ಎಂದೂ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.