ADVERTISEMENT

ಪಾಕಿಸ್ತಾನದೊಂದಿಗೆ ಸಂವಾದ ನಡೆಸಿ: ಕೇಂದ್ರಕ್ಕೆ ಮುಫ್ತಿ ಆಗ್ರಹ

ಪಿಟಿಐ
Published 28 ಜುಲೈ 2025, 14:30 IST
Last Updated 28 ಜುಲೈ 2025, 14:30 IST
<div class="paragraphs"><p>ಶ್ರೀನಗರ: ಸೋಮವಾರ ಇಲ್ಲಿ ನಡೆದ ಪಕ್ಷದ 26ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ </p></div>

ಶ್ರೀನಗರ: ಸೋಮವಾರ ಇಲ್ಲಿ ನಡೆದ ಪಕ್ಷದ 26ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ

   

(ಪಿಟಿಐ ಚಿತ್ರ)

ಶ್ರೀನಗರ: ಭಾರತ ಮುಂದುವರಿಯಬೇಕಾದರೆ ಮತ್ತು ಸಮೃದ್ಧ ರಾಷ್ಟ್ರವಾಗಬೇಕಾದರೆ, ಪಾಕಿಸ್ತಾನದ ಜೊತೆಗೆ ಸಂವಾದ ಮತ್ತು ಸಮನ್ವಯದ ಹಾದಿಯನ್ನು ಹಿಡಿಯಬೇಕು ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಸೋಮವಾರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ADVERTISEMENT

ಇಲ್ಲಿ ಪಕ್ಷದ 26ನೇ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಮ್ಮು ಕಾಶ್ಮೀರದ ಜನರು ನಿಮ್ಮ ಶತ್ರುಗಳಲ್ಲ ಎಂದು ಹೇಳಲು ಬಯಸುತ್ತೇನೆ. ಅವರನ್ನು ‘ನಿಮ್ಮ ಹೃದಯದಿಂದ’ ನೋಡಿ ಮತ್ತು ಆಲಿಸಿ. ಹಾಗೆ ಮಾಡದ ಹೊರತು ಭಾರತ-ಪಾಕಿಸ್ತಾನದ ಸಮಸ್ಯೆ ಬಗೆಹರಿಯುವುದಿಲ್ಲ’ ಎಂದು ಅವರು ಹೇಳಿದ್ದಾರೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.