ಕಣ್ಣೂರು (ಕೇರಳ): ಬೀದಿ ನಾಯಿಗಳು ಕಚ್ಚುವ ಕುರಿತು ಬೀದಿನಾಟಕ ಮಾಡುತ್ತಿದ್ದ ಕಲಾವಿದ ರಾಧಾಕೃಷ್ಣನ್ ಎನ್ನುವವರಿಗೆ ನಾಯಿಯೇ ಕಚ್ಚಿರುವ ಘಟನೆ ಉತ್ತರ ಕೇರಳದ ಮಯ್ಯಿಲ್ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಮಗುವೊಂದಕ್ಕೆ ಬೀದಿ ನಾಯಿ ಕಚ್ಚುವ ಸನ್ನಿವೇಶದಲ್ಲಿ ರಾಧಾಕೃಷ್ಣನ್ ಅವರು ಅಭಿನಯಿಸುತ್ತಿದ್ದರು. ಈ ವೇಳೆ ನಾಯಿಯೊಂದು ವೇದಿಕೆ ಮೇಲೆ ಹಾರಿ ಕಲಾವಿದರ ಕಾಲಿನ ಹಿಂಭಾಗಕ್ಕೆ ಕಚ್ಚಿದೆ. ಆದರೂ ರಾಧಾಕೃಷ್ಣನ್ ಅವರು ಅಭಿನಯವನ್ನು ನಿಲ್ಲಿಸದೆ, ನಾಟಕವನ್ನು ಪೂರ್ಣಗೊಳಿಸಿದರು. ಬಳಿಕ ಘಟನೆಯ ಬಗ್ಗೆ ಆಯೋಜಕರಿಗೆ ಮಾಹಿತಿ ನೀಡಿದರು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
‘ಹಿಂಬದಿಯಿಂದ ನಾಯಿ ಬಂದು ಕಚ್ಚಿತು. ಅದೂ ನಾಟಕದ ಭಾಗ ಎಂದು ಪ್ರದರ್ಶನ ನೋಡುತ್ತಿದ್ದ ವೀಕ್ಷಕರು ಭಾವಿಸಿದ್ದರು’ ಎಂದು ರಾಧಾಕೃಷ್ಣನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.