ADVERTISEMENT

ನಿಷೇಧಿತ ಪ್ಲಾಸ್ಟಿಕ್‌ ಬಳಕೆ ವಿರುದ್ಧ ಕ್ರಮ; ಪಿಣರಾಯಿ ವಿಜಯನ್‌

ಪಿಟಿಐ
Published 18 ಜುಲೈ 2024, 14:19 IST
Last Updated 18 ಜುಲೈ 2024, 14:19 IST
ಪಿಣರಾಯಿ ವಿಜಯನ್‌
ಪಿಣರಾಯಿ ವಿಜಯನ್‌   

ತಿರುವನಂತಪುರ: ನಿಷೇಧಿತ ಪ್ಲಾಸಿಕ್‌ ಬ್ಯಾಗ್‌ ಮತ್ತು ಉತ್ಪನ್ನಗಳ ಬಳಕೆ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಗುರುವಾರ ಹೇಳಿದರು.

ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ನಡೆದ ಆನ್‌ಲೈನ್‌ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿಯು ಹೇಳಿಕೆ ಬಿಡುಗಡೆ ಮಾಡಿದೆ.

ಸಭೆಯಲ್ಲಿ ಲೋಕೋಪಯೋಗಿ, ಕಾರ್ಮಿಕ, ಆಹಾರ, ಕ್ರೀಡೆ, ರೈಲ್ವೆ, ಆರೋಗ್ಯ ಮತ್ತು ಜಲ ಸಂಪನ್ಮೂಲ ಇಲಾಖೆಗಳ ಸಚಿವರು, ಕೆಲ ಶಾಸಕರು, ತಿರುವನಂತಪುರ ಮೇಯರ್‌ ಮತ್ತು ಮುಖ್ಯಕಾರ್ಯದರ್ಶಿ ಭಾಗಿಯಾಗಿದ್ದರು ಎಂದು ತಿಳಿಸಿದೆ.

ADVERTISEMENT

ರಸ್ತೆಗಳಲ್ಲಿ ಮತ್ತು ನದಿಗಳಲ್ಲಿ ತ್ಯಾಜ್ಯ ಎಸೆಯಲು ಬಳಸುವ ವಾಹನದ ನೋಂದಣಿ ರದ್ದು, ಕೃತಕ ಬುದ್ಧಿಮತ್ತೆ ಕ್ಯಾಮೆರಾ ಅಳವಡಿಕೆ ಸೇರಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವ ಕುರಿತಂತೆ ಹಲವು ಸಲಹೆಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು ಎಂದೂ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.