ADVERTISEMENT

ಬ್ಯಾಟ್‌ ಕದಿಯುವುದನ್ನು ನೋಡಿದ್ದಕ್ಕೆ 6ನೇ ತರಗತಿ ವಿದ್ಯಾರ್ಥಿನಿಯನ್ನು ಕೊಂದ ಬಾಲಕ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 15:59 IST
Last Updated 23 ಆಗಸ್ಟ್ 2025, 15:59 IST
<div class="paragraphs"><p>(ಸಾಂದರ್ಭಿಕ ಚಿತ್ರ)</p></div>

(ಸಾಂದರ್ಭಿಕ ಚಿತ್ರ)

   

ಹೈದರಾಬಾದ್‌: ತಾನು ಕ್ರಿಕೆಟ್‌ ಬ್ಯಾಟ್‌ ಕದಿಯುವುದನ್ನು ನೋಡಿದಳೆಂಬ ಕಾರಣಕ್ಕೆ 14 ವರ್ಷದ ಬಾಲಕನೊಬ್ಬ 10 ವರ್ಷದ ಬಾಲಕಿಯನ್ನು ಹತ್ಯೆ ಮಾಡಿರುವ ಘಟನೆ ಕೂಕಟಪಲ್ಲಿಯಲ್ಲಿ ನಡೆದಿದೆ ಎಂದು ಸೈಬರಾಬಾದ್‌ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಬಾಲಕನು 10ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಆಗಸ್ಟ್‌ 18ರ ಬೆಳಿಗ್ಗೆ ಪಕ್ಕದ ಮನೆಯ ಬಾಲಕನ ಎಂಆರ್‌ಎಫ್‌ ಬ್ಯಾಟ್‌ ಕದಿಯಲು ಯೋಜನೆ ರೂಪಿಸಿದ್ದಾನೆ. ಆತ ಬ್ಯಾಟ್‌ ಕದಿಯುವಾಗ ಪಕ್ಕದ ಮನೆಯ ಬಾಲಕನ ಸಹೋದರಿ (10 ವರ್ಷದ ಬಾಲಕಿ) ಅದನ್ನು ಗಮನಿಸಿ, ಆತನಿಗೆ ಎಚ್ಚರಿಕೆ ನೀಡಿದ್ದಾಳೆ. 

ADVERTISEMENT

ಇದರಿಂದ ಭಯಗೊಂಡ ಬಾಲಕನು ಬಾಲಕಿಗೆ ಚಾಕುವಿನಿಂದ ಹಲವು ಬಾರಿ ಇರಿದು ಕೊಲೆ ಮಾಡಿದ್ದಾನೆ ಎಂದು ಸೈಬರಾಬಾದ್‌ ಪೊಲೀಸ್‌ ಆಯುಕ್ತ ಅವಿನಾಶ್‌ ಮೊಹಾಂತಿ ತಿಳಿಸಿದ್ದಾರೆ.

ಬಳಿಕ ಚಾಕು ಮತ್ತು ಕೈಗಳನ್ನು ತೊಳೆದುಕೊಂಡು, ಬಟ್ಟೆ ಬದಲಾಯಿಸಿ ತನಗೆ ಏನೂ ತಿಳಿದಿಲ್ಲ ಎಂಬಂತೆ ವರ್ತಿಸಿದ್ದಾನೆ. ಬಾಲಕನನ್ನು ಶುಕ್ರವಾರ ಬಂಧಿಸಲಾಗಿದೆ. ಶಾಲೆಗೆ ರಜೆ ಇದ್ದ ಕಾರಣ ಬಾಲಕಿ ಮನೆಯಲ್ಲಿ ಒಬ್ಬಂಟಿಯಾಗಿ ಇರುವಾಗ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.