ADVERTISEMENT

ರಾಷ್ಟ್ರದ ಸಮಸ್ಯೆಗಳ ಉತ್ಖನನ ಮಾಡಿ ಎಂದಿದ್ದಕ್ಕೆ ವಿತ್ತ ಮಂತ್ರಿ ಕೇಳಿ ಎಂದ ಸ್ವಾಮಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಮೇ 2022, 7:40 IST
Last Updated 19 ಮೇ 2022, 7:40 IST
ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ | ಟ್ವಿಟರ್‌ ಚಿತ್ರ
ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ | ಟ್ವಿಟರ್‌ ಚಿತ್ರ   

ಬೆಂಗಳೂರು: ಮಹಾಭಾರತದ ದ್ವಾರಕಾ ಪಟ್ಟಣ ಉತ್ಖನನಕ್ಕೆ ಸಂಬಂಧಿಸಿದ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಟ್ವಿಟರ್‌ ಬಳಕೆದಾರರೊಬ್ಬರು, 'ಹಸಿವು, ಬಡತನ ಮತ್ತು ನಿರುದ್ಯೋಗ ಸಮಸ್ಯೆಗಳ ಉತ್ಖನನವನ್ನು ಆರಂಭಿಸಿ' ಎಂದು ಸಲಹೆ ನೀಡಿದ್ದಾರೆ.

ಜಿಗರ್‌ ಶಾ ಎಂಬ ಟ್ವಿಟರ್‌ ಬಳಕೆದಾರರೊಬ್ಬರು ನೀಡಿರುವ ಈ ಸಲಹೆಗೆ,'ವಿತ್ತ ಸಚಿವರನ್ನು ಕೇಳಿ' ಎಂದು ಸುಬ್ರಮಣಿಯನ್‌ ಸ್ವಾಮಿ ಉತ್ತರಿಸಿದ್ದಾರೆ.

'ಸಧ್ಯ ಪ್ರಕ್ರಿಯೆಯಲ್ಲಿರುವ ಸಮುದ್ರದೊಳಗಿನ ದ್ವಾರಕಾ ಪಟ್ಟಣದ ಉತ್ಖನನವನ್ನು ಕಾಂಗ್ರೆಸ್‌ ಸರ್ಕಾರ ತಡೆ ಹಿಡಿದಿತ್ತೇ? ಕಾರಣ ಬ್ರಿಟಿಷ್‌ ಸಾಮ್ರಾಜ್ಯಶಾಹಿಯು ಭಾರತದ ಮಹಾಗ್ರಂಥಗಳಾದ ರಾಮಾಯಣ, ಮಹಾಭಾರತ ಕೇವಲ ಪುರಾಣ ಗ್ರಂಥಗಳೆಂದು ಪರಿಗಣಿಸಿತ್ತು' ಎಂದು ಸುಬ್ರಮಣಿಯನ್‌ ಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ADVERTISEMENT

'ಬ್ರಿಟಿಷ್‌ ಸಮ್ರಾಜ್ಯಶಾಹಿಗಳಿಗೆ ಮತ್ತು ಅವರ ಭಾರತೀಯ ಬೆಂಬಲಿಗರು ಅವರ ತಪ್ಪುಗಳನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ.ಮಹಾಭಾರತ ನೈಜವಾಗಿ ನಡೆದ ಘಟನೆ ಹಾಗೂ ಶ್ರೀ ರಾಮ ಮತ್ತು ಶ್ರೀ ಕೃಷ್ಣ ಅಸ್ತಿತ್ವದಲ್ಲಿದ್ದರು ಎಂಬುದನ್ನು ಸ್ವೀಕರಿಸಲು ಸಿದ್ಧರಿಲ್ಲ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.