ADVERTISEMENT

ಸಂಸತ್ ಕ್ಯಾಂಟೀನ್‌ನಲ್ಲಿ ಹೊಸ ದರ: ಹಳೆದಕ್ಕೂ ಹೊಸ ದರಕ್ಕೂ ಇಷ್ಟಿದೆ ವ್ಯತ್ಯಾಸ...

ಹೊಸ ದರ ಇಂದಿನಿಂದ ಜಾರಿ

ಏಜೆನ್ಸೀಸ್
Published 29 ಜನವರಿ 2021, 2:35 IST
Last Updated 29 ಜನವರಿ 2021, 2:35 IST
ಸಂಸತ್ ಭವನ
ಸಂಸತ್ ಭವನ   

ನವದೆಹಲಿ: ಸಂಸತ್‌ ಕ್ಯಾಂಟೀನ್‌ನಲ್ಲಿ ಹೊಸ ದರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಇಂದಿನಿಂದ (ಜ.29) ಜಾರಿಗೆ ಬರಲಿದೆ.

ಇದರ ಪ್ರಕಾರ, ಮಾಂಸಾಹಾರಿ ಬಫೆಟ್ ಊಟಕ್ಕೆ ₹700 ಹಾಗೂ ಸಸ್ಯಾಹಾರಿ ಬಫೆಟ್ ಊಟಕ್ಕೆ ₹500 ನಿಗದಿಪಡಿಸಲಾಗಿದೆ. ಇರುವುದರಲ್ಲಿ ಚಪಾತಿಗೆ ಅತಿ ಕಡಿಮೆ ದರ, ₹3 ನಿಗದಿಪಡಿಸಲಾಗಿದೆ.

ಹಿಂದಿನ ದರಪಟ್ಟಿ ಪ್ರಕಾರ, ಚಪಾತಿಗೆ ₹2, ಹೈದರಾಬಾದಿ ಚಿಕನ್ ಬಿರಿಯಾನಿಗೆ ₹65 ಇತ್ತು.

ADVERTISEMENT

ಇದೀಗ ಒಂದು ಪ್ಲೇಟ್ ಚಿಕನ್ ಬಿರಿಯಾನಿ, ಚಿಕನ್ ಕಟ್ಲೆಟ್, ಚಿಕನ್ ಫ್ರೈ ಅಥವಾ ವೆಜ್ ಥಾಲಿಗೆ ತಲಾ ₹100 ನಿಗದಿಪಡಿಸಲಾಗಿದೆ. ಚಿಕನ್ ಕರಿಗೆ ₹75 ದರವಿದೆ.

ಮಟನ್ ಬಿರಿಯಾನಿ ಮತ್ತು ಮಟನ್ ಕಟ್ಲೆಟ್‌ಗೆ ₹150 ಹಾಗೂ ಮಟನ್ ಕರಿಗೆ ₹125 ಇದೆ.

ಸಂಸದರಿಗೆ ಮತ್ತು ಇತರರಿಗೆ ನೀಡುತ್ತಿದ್ದ ಆಹಾರಗಳ ಮೇಲಿನ ಸಬ್ಸಿಡಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಲೋಕಸಭೆ ಸಭಾಧ್ಯಕ್ಷ ಓಂ ಬಿರ್ಲಾ ಜನವರಿ 19ರಂದು ತಿಳಿಸಿದ್ದರು. ಇದರಂತೆ, ದರಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಸಬ್ಸಿಡಿ ಸ್ಥಗಿತಗೊಳಿಸಿರುವುದರಿಂದ ಆಗುವ ಉಳಿತಾಯದ ಬಗ್ಗೆ ಬಿರ್ಲಾ ಅವರು ಯಾವುದೇ ಮಾಹಿತಿ ನೀಡಿರಲಿಲ್ಲ. ಆದರೆ, ಮೂಲಗಳ ಪ್ರಕಾರ ವಾರ್ಷಿಕವಾಗಿ ₹8 ಕೋಟಿ ಉಳಿತಾಯವಾಗಲಿದೆ ಎಂದು ಹೇಳಲಾಗಿದೆ.

‘ಮುಂದಿನ ದಿನಗಳಲ್ಲಿ ಸಂಸತ್‌ ಕ್ಯಾಂಟೀನ್‌ಗಳನ್ನು ಉತ್ತರ ರೈಲ್ವೆ ಬದಲು ಐಟಿಡಿಸಿ ನಡೆಸಲಿದೆ’ ಎಂದೂ ಬಿರ್ಲಾ ತಿಳಿಸಿದ್ದರು.

ಸಂಸತ್ ಕ್ಯಾಂಟೀನ್ ಹೊಸ ದರ ಪಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.