ADVERTISEMENT

5 ಎಕರೆಯಲ್ಲಿ ಮಸೀದಿ, ಆಸ್ಪತ್ರೆ ಸುನ್ನಿ ವಕ್ಫ್‌ ಮಂಡಳಿ ನಿರ್ಧಾರ

ಪಿಟಿಐ
Published 24 ಫೆಬ್ರುವರಿ 2020, 19:45 IST
Last Updated 24 ಫೆಬ್ರುವರಿ 2020, 19:45 IST
ಅಯೋಧ್ಯಾ ರೈಲ್ವೆ ಜಂಕ್ಷನ್ ( ಪಿಟಿಐ  ಚಿತ್ರ)
ಅಯೋಧ್ಯಾ ರೈಲ್ವೆ ಜಂಕ್ಷನ್ ( ಪಿಟಿಐ ಚಿತ್ರ)   

ಲಖನೌ: ‘ಅಯೋಧ್ಯೆಯ ರಾಮಜನ್ಮಭೂಮಿ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಪ್ರಕಾರ, ಉತ್ತರ ಪ್ರದೇಶ ಸರ್ಕಾರ ನೀಡಿದ 5 ಎಕರೆ ಪ್ರದೇಶದಲ್ಲಿ ಮಸೀದಿ, ಇಂಡೋ–ಇಸ್ಲಾಮಿಕ್ ಸಂಶೋಧನಾ ಕೇಂದ್ರ ಹಾಗೂ ಆಸ್ಪತ್ರೆಯನ್ನು ನಿರ್ಮಿಸಲಾಗುವುದು’ ಎಂದು ಸುನ್ನಿ ಕೇಂದ್ರ ವಕ್ಫ್ ಮಂಡಳಿ ಸೋಮವಾರ ತಿಳಿಸಿದೆ.

ಈ ಮಾಹಿತಿಯನ್ನು ಸುನ್ನಿ ಕೇಂದ್ರ ವಕ್ಫ್ ಮಂಡಳಿಯ ಅಧ್ಯಕ್ಷ ಜುಫರ್ ಫಾರೂಕಿ ಸುದ್ದಿಗಾರರಿಗೆ ನೀಡಿದ್ದಾರೆ.

‘ನಿರ್ಮಿಸಲಿರುವ ಮಸೀದಿಗೆ ಬಾಬರಿ ಮಸೀದಿಯ ಹೆಸರಿಡುತ್ತೀರಾ’ ಎನ್ನುವ ಸುದ್ದಿಗಾರರ ಪ್ರಶ್ನೆಗೆ, ‘ಈ ಬಗ್ಗೆ ಟ್ರಸ್ಟ್‌ ನಿರ್ಧರಿಸುತ್ತದೆ. ವಕ್ಫ್ ಮಂಡಳಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಮಸೀದಿಯಲ್ಲದೇ, ಇಂಡೋ–ಇಸ್ಲಾಮಿಕ್ ಸಂಶೋಧನಾ ಕೇಂದ್ರ, ಸಾರ್ವಜನಿಕ ಗ್ರಂಥಾಲಯ, ಆಸ್ಪತ್ರೆ ನಿರ್ಮಾಣ ಮಾಡಲಾಗುವುದು’ ಎಂದು ಫಾರೂಕಿ ವಿವರಿಸಿದರು.

ADVERTISEMENT

ವಕ್ಫ್ ಮಂಡಳಿಯಲ್ಲಿ ಫಾರೂಕಿ ಸೇರಿದಂತೆ ಒಟ್ಟು 8 ಸದಸ್ಯರಿದ್ದಾರೆ. ಸಭೆಯಲ್ಲಿ ಒಟ್ಟು ಆರು ಸದಸ್ಯರು
ಭಾಗವಹಿಸಿದ್ದರು.

ಅಯೋಧ್ಯೆಯ ಸೊಹವಾಲ್ ಪ್ರದೇಶದ ಧನ್ನಿಪುರ ಗ್ರಾಮದಲ್ಲಿನ 5 ಎಕರೆ ಪ್ರದೇಶವನ್ನು ಉತ್ತರ ಪ್ರದೇಶ ಸರ್ಕಾರವು ವಕ್ಫ್ ಮಂಡಳಿಗೆ ಈಚೆಗೆ ಹಂಚಿಕೆ ಮಾಡಿದೆ. ಇದು ಜಿಲ್ಲಾ ಕೇಂದ್ರದಿಂದ 20 ಕಿ.ಮೀ. ದೂರವಿರುವ ಅಯೋಧ್ಯೆ–ಲಖನೌ ಹೆದ್ದಾರಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.