ADVERTISEMENT

ಮರಣದಂಡನಾ ಮಾರ್ಗಸೂಚಿ ಪರಾಮರ್ಶಿಸುವ ಕೇಂದ್ರ ಮನವಿ ಪರಿಶೀಲಿಸಲು ‘ಸುಪ್ರೀಂ ಒಪ್ಪಿಗೆ

ಪಿಟಿಐ
Published 31 ಜನವರಿ 2020, 11:41 IST
Last Updated 31 ಜನವರಿ 2020, 11:41 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ‘ಮರಣದಂಡನೆ ಪ್ರಕರಣಗಳಲ್ಲಿ ಸಂತ್ರಸ್ತ ಮತ್ತು ಸಮಾಜ ಕೇಂದ್ರಿತ ಮಾರ್ಗಸೂಚಿಗಳನ್ನು ಹೊಂದಬೇಕು’ ಎಂಬ ಕೇಂದ್ರ ಸರ್ಕಾರದ ಮನವಿಯನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.

ಜನವರಿ 22ರಂದು ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯು ಸದ್ಯ ಈಗಿರುವ ಆರೋಪಿ ಮತ್ತು ಅಪರಾಧಿ ಕೇಂದ್ರಿತ ಮಾರ್ಗಸೂಚಿಗಳನ್ನು ಒಳಗೊಂಡಿತ್ತು.

ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ನೇತೃತ್ವದ ನ್ಯಾಯಪೀಠ, 2014ರಲ್ಲಿ ಶತ್ರುಘ್ನ ಚೌಹಾಣ್‌ ಪ್ರಕರಣದಲ್ಲಿ ರೂಪಿಸಿದ್ದ ಮಾರ್ಗಸೂಚಿಗಳ ಕುರಿತು ಕೆಲವರಿಂದ ಅಭಿಪ್ರಾಯಗಳನ್ನು ಕೋರಿದೆ.

ADVERTISEMENT

‘ಕೇಂದ್ರದ ಮನವಿಯನ್ನು ಪರಿಶೀಲಿಸುವಾಗ, ಶತ್ರುಘ್ನ ಚೌಹಾಣ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಬದಲಾವಣೆಗಳನ್ನು ಮಾಡುವುದಿಲ್ಲ’ ಎಂದು ನ್ಯಾಯಪೀಠದಲ್ಲಿದ್ದ ಬಿ.ಆರ್. ಗವಾಯಿ ಮತ್ತು ಸೂರ್ಯಕಾಂತ್‌ ಸ್ಪಷ್ಟಪಡಿಸಿದರು.ಜೊತೆಗೆ ಶತ್ರುಘ್ನ ಚೌಹಾಣ್‌ ಪ್ರಕರಣದ ಪ್ರತಿವಾದಿಗಳಿಗೂ ಪೀಠ ನೋಟಿಸ್‌ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.